Connect with us

Hi, what are you looking for?

ರಾಷ್ಟ್ರೀಯ

ಒಡಿಶಾ ರೈಲು ದುರಂತ ; ಮೃತರ ಸಂಖ್ಯೆ 288ಕ್ಕೆ ಏರಿಕೆ

1

ಒಡಿಶಾ : ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದುವರೆಗೂ 288 ಜನರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಇನ್ನು ಈ ದುರಂತದಲ್ಲಿ 1091ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ನಿನ್ನೆ ಸಂಜೆ ಕೋರಮಂಡಲ್ ಎಕ್ಸ್ಪ್ರೆಸ್‌ನ ಹಲವಾರು ಬೋಗಿಗಳು ಹಳಿ ತಪ್ಪಿದ ಪರಿಣಾಮ, ಅದು ಎರಡನೇ ಮಾರ್ಗದಲ್ಲಿ ಮುಂಭಾಗದಿಂದ ಬರುತ್ತಿದ್ದ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಈ ದುರಂತ ಸಂಭವಿಸಿದೆ.
ಒಡಿಶಾ ರೈಲು ಅಪಘಾತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಆಗ್ನೇಯ ವಲಯದ ರೈಲ್ವೆ ಸುರಕ್ಷತಾ ಆಯುಕ್ತ (CRS) ಎ.ಎಂ.ಚೌಧರಿ ಅವರು ಪ್ರಮುಖ ರೈಲು ಅಪಘಾತದ ಬಗ್ಗೆ ತನಿಖೆ ನಡೆಸಲಿದ್ದಾರೆ.

ಈ ನಡುವೆ ರೈಲು ಅಪಘಾತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ಜನರು ಸಾವನ್ನಪ್ಪಿರುವುದನ್ನ ನೋಡಿ ಆಘಾತವಾಗಿದೆ ಎಂದರು. ಇನ್ನು ಗಾಯಗೊಂಡವರ ಚಿಕಿತ್ಸೆಗೆ ಸರ್ಕಾರ ಯಾವುದೇ ಅವಕಾಶವನ್ನ ಬಿಡುವುದಿಲ್ಲ. ಇದೊಂದು ಗಂಭೀರ ಘಟನೆಯಾಗಿದ್ದು, ಎಲ್ಲ ಕೋನಗಳಿಂದಲೂ ತನಿಖೆಗೆ ಸೂಚನೆ ನೀಡಲಾಗಿದೆ. ತಪ್ಪಿತಸ್ಥರೆಂದು ಸಾಬೀತಾದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದರು.

ಇನ್ನು ಆದಷ್ಟು ಬೇಗ ರೈಲು ಹಳಿಗಳನ್ನ ಸರಿಪಡಿಸಲು ಮತ್ತು ರೈಲು ಸಂಚಾರವನ್ನ ಪುನಃಸ್ಥಾಪಿಸಲು ರೈಲ್ವೆ ಇಲಾಖೆ ಪ್ರಯತ್ನಿಸುತ್ತಿದೆ. ರೈಲು ಅಪಘಾತದಲ್ಲಿ ಗಾಯಗೊಂಡವರು ಮತ್ತು ಸಂತ್ರಸ್ತರನ್ನ ಭೇಟಿ ಮಾಡಿದ್ದೇನೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ರಾಷ್ಟ್ರೀಯ

1 ನವದೆಹಲಿ: ಮಂಗಳೂರು ಜಂಕ್ಷನ್ ರೈಲ್ವೆ ಸ್ಟೇಷನ್ ಸೇರಿ ದೇಶದ 508 ರೈಲು ನಿಲ್ದಾಣಗಳ ನವೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ವೀಡಿಯೋ ಕಾನ್ಪರೆನ್ಸ್ ಮೂಲಕ ದೆಹಲಿಯಲ್ಲಿ ಏಕಕಾಲಕ್ಕೆ ಶಂಕುಸ್ಥಾಪನೆ ಮಾಡಿದರು. ಅಮೃತ...

ಅರೆ! ಹೌದಾ?

1 ಬೆಂಗಳೂರು: ಚಲಿಸುತ್ತಿದ್ದ ರೈಲಿನಲ್ಲಿ ಏಕಕಾಲದಲ್ಲಿ ನಮಾಜ್- ಹನುಮಾನ್ ಚಾಲೀಸಾ ಓದಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕುರಿತು free press journal ವೆಬ್‌ಸೈಟ್ ವರದಿ ಮಾಡಿದ್ದು, ಆಲ್ಟ್ ನ್ಯೂಸ್ ಡಾಟ್...

ಕರಾವಳಿ

0 ಉಡುಪಿ: ಮಣಿಪಾಲ ಠಾಣಾ ವ್ಯಾಪ್ತಿಯ ಹೆರ್ಗ ಗ್ರಾಮದ ಈಶ್ವರ ನಗರದ ಅಪಾರ್ಟ್ಮೆಂಟ್‌ ಒಂದರ ಬಳಿ ಸಾರ್ವಜನಿಕ ರಸ್ತೆಯಲ್ಲಿ ನಿಷೇಧಿತ ಮಾದಕ ದ್ರವ್ಯ ಮೆಥಾಂಪೆಟಮೆನ್‌ ನನ್ನು ಮಾರಾಟ ಮಾಡುವ ಪ್ರಯತ್ನದಲ್ಲಿದ್ದ ಇಬ್ಬರು ಕಾನೂನು...

ಕರಾವಳಿ

1 ವರದಿ : ದಿನೇಶ್ ರಾಯಪ್ಪನಮಠ ಕುಂದಾಪುರ : ಕಾರೊಂದು ಡಿವೈಡರ್ ದಾಟಿ ಪಲ್ಟಿಯಾಗಿ ಮತ್ತೊಂದು ಕಡೆಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿಗೆ ಡಿಕ್ಕಿಯಾದ ಘಟನೆ ಹೆಮ್ಮಾಡಿ ಸಮೀಪದ ಜಾಲಾಡಿ ಎಂಬಲ್ಲಿ ಇಂದು ನಡೆದಿದೆ....