Connect with us

Hi, what are you looking for?

ಸಿನಿಮಾ

ಬಾಲಿವುಡ್ ಖ್ಯಾತ ಹಿರಿಯ ನಟಿ ‘ಸುಲೋಚನಾ ಲಾಟ್ಕರ್’ ನಿಧನ

1

ಸುಲೋಚನಾ ವಯೋಸಹಜ ಅನಾರೋಗ್ಯದಿಂದ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ನಾಳೆ ಅವರ ಪಾರ್ಥಿವ ಶರೀರವನ್ನು ಪ್ರಭಾದೇವಿಯಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದು ಮತ್ತು ನಂತರ ಅಂತಿಮ ವಿಧಿಗಳನ್ನು ಶಿವಾಜಿ ಪಾರ್ಕ್‌ನಲ್ಲಿರುವ ಸ್ಮಶಾನದಲ್ಲಿ ನಡೆಸಲಾಗುವುದು ಎಂಬ ಮಾಹಿತಿ ಸಿಕ್ಕಿದೆ.

1960 ಮತ್ತು 70ರ ದಶಕದ ಜನಪ್ರಿಯ ಬಾಲಿವುಡ್, ಮರಾಠಿ ಚಿತ್ರಗಳಲ್ಲಿ ತಾಯಿಯ ಪಾತ್ರಗಳಲ್ಲಿ ನಟಿಸಿ ಸುಲೋಚನಾ ಖ್ಯಾತರಾಗಿದ್ದರು. ಅವರು ವಯೋಸಹಜ ಕಾಯಿಲೆಯಿಂದ ಮುಂಬೈನ ಸುಶ್ರುಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸುಲೋಚನಾ ಅವರ ಆರೋಗ್ಯವು ಶನಿವಾರ ತೀರಾ ಹದಗೆಟ್ಟಿದ್ದು, ಕಳೆದ ರಾತ್ರಿಯಿಂದ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಅದಕ್ಕೂ ಮೊದಲು, ಅವರಿಗೆ ನಿರಂತರ ಆಮ್ಲಜನಕ ಪೂರೈಕೆಯನ್ನು ನೀಡಲಾಗುತ್ತಿತ್ತು. ಸದ್ಯ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like