ಹಿರಿಯಡಕ : ಬಂಟರ ಸಂಘ ಹಿರಿಯಡಕ ಇದರ ವಾರ್ಷಿಕ ಸಮ್ಮಿಲನ ಸಮಾರಂಭವು ಭಾನುವಾರ ನಡೆಯಿತು.
ಮುಲ್ಕಿ ವಿಜಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಶೀಮಣಿ ಶೆಟ್ಟಿಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿತೀಶ್ ಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಿರಿಯಡಕದಲ್ಲಿ ಸಾರ್ಥಕ 45 ವರ್ಷಗಳ ವೈದ್ಯಕೀಯ ಸೇವೆ ಸಲ್ಲಿಸಿರುವ ದೇವದಾಸ್ ಕಾಮತ್, ಸುಧಾ ದೇವದಾಸ್ ಕಾಮತ್, ಹಾಗೂ ಉದಯೋನ್ಮಖ ಲೇಖಕಿ ನೀತಾ ರಾಜೇಶ್ ಶೆಟ್ಟಿ, ಕ್ರೀಡಾ ಸಾಧಕಿ ಸ್ವಸ್ತಿ ಶೆಟ್ಟಿ ಮತ್ತು ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷ, ನಿವೃತ್ತ ಮುಖ್ಯೋಪಾಧ್ಯಾಯ ಕುದಿ ವಸಂತ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಂಘದ ಪ್ರಥಮ ಅಧ್ಯಕ್ಷರಾದ ವಿಶ್ವನಾಥ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ರವೀಂದ್ರನಾಥ್ ಶೆಟ್ಟಿ ಸ್ವಾಗತಿಸಿದರು.
ಸಂಜನಾ ರೈ ಹಾಗೂ ಸುರೇಶ್ ಶೆಟ್ಟಿ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಂಧ್ಯಾ ಶೆಟ್ಟಿ ವಂದಿಸಿದರು. ನೀತಾ ರಾಜೇಶ್ ಶೆಟ್ಟಿ ಮತ್ತು ಸ್ವಾತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

