ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸದಾ ಸುದ್ದಿಯಲ್ಲಿರುವ ವ್ಯಕ್ತಿ. ತನ್ನದೇ ಆದ ದೇಶವನ್ನು ಆಳುತ್ತಿರೋದು ಎಲ್ಲರಿಗೂ ಗೊತ್ತಿದೆ. ಸದ್ಯ ಸುದ್ದಿಯಲ್ಲಿರೋದು ಆತ ಯಾರನ್ನು ಪ್ರಧಾನಿಯನ್ನಾಗಿ ತನ್ನ ದೇಶಕ್ಕೆ ಆರಿಸಿದ್ದಾನೆ ಅನ್ನೋದು.
ಹೌದು, ತನ್ನ ಆತ್ಮೀಯ ಶಿಷ್ಯಯನ್ನು ತನ್ನ ದೇಶದ ಪ್ರಧಾನಿಯನ್ನಾಗಿ ಮಾಡಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೈಲಾಸ ದೇಶ ಎಂಬ ಹೊಸ ದೇಶವನ್ನೇ ಕಟ್ಟಿರುವ ನಿತ್ಯಾನಂದ ಹಲವು ವರ್ಷಗಳ ಕಾಲ ತನ್ನ ಶಿಷ್ಯರ ಜೊತೆ ಅಲ್ಲಿಯೇ ನೆಲೆಯೂರಿದ್ದಾನೆ. ಇದೀಗ ಆ ದೇಶಕ್ಕೆ ಪ್ರಧಾನಿಯನ್ನು ನೇಮಕ ಮಾಡಿದ್ದಾನೆ.
ನಟಿ ರಂಜಿತಾ ಕಾರಣದಿಂದಾಗಿಯೇ ನಿತ್ಯಾನಂದ ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದ. ಇಬ್ಬರ ನಡುವಿನ ಖಾಸಗಿ ವಿಡಿಯೋ ವಿಚಾರವಾಗಿ ಕೋರ್ಟ್ ಮೆಟ್ಟಿಲು ಕೂಡ ಏರಿದ್ದ. ನಂತರ ದೇಶವನ್ನೇ ಬಿಡಬೇಕಾಗಿ ಬಂದಿತ್ತು. ದೇಶವನ್ನು ತೊರೆಯುವಾಗ ತನ್ನ ಅಷ್ಟೂ ಶಿಷ್ಯರನ್ನು ವಿಮಾನ ಏರಿಸಿ ಹೊರಟೇ ಬಿಟ್ಟಿದ್ದ.

ಈ ಹಿಂದೆ ತನ್ನ ದೇಶದ ಕರೆನ್ಸಿಯನ್ನು ನಿತ್ಯಾನಂದ ಬಿಡುಗಡೆ ಮಾಡಿದ್ದ. ತನ್ನ ದೇಶದ ವೀಸಾ ಕೂಡ ಘೋಷಿಸಿದ್ದ. ಕೈಲಾಸ ದೇಶಕ್ಕೆ ಬರುವವರು ಯಾವೆಲ್ಲ ನಿಯಮ ಪಾಲಿಸಬೇಕು ಎನ್ನುವ ಕುರಿತಾದ ವೆಬ್ ಸೈಟ್ ಕೂಡ ನಿತ್ಯಾನಂದ ತೆರೆದಿದ್ದಾನೆ.