ರಬತ್: ಮೊರಾಕ್ಕೋ ಭೀಕರ ಭೂಕಂಪಕ್ಕೆ 2,012ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 2,059 ಜನ ಗಾಯಗೊಂಡಿದ್ದಾರೆ. ಇದರಲ್ಲಿ 1,404 ಮಂದಿ ಗಂಭೀರ ಪರಿಸ್ಥಿತಿಯಲ್ಲಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.
ರಕ್ಷಣಾ ಕಾರ್ಯ ಮುಂದುವರೆದಿದೆ. ವಸತಿ ಕಳೆದುಕೊಂಡವರು ಸಿಕ್ಕ ಜಾಗದಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದಾರೆ. ಐತಿಹಾಸಿಕ ಕಟ್ಟಡಗಳೂ ಸೇರಿದಂತೆ ಮಸೀದಿ ಹಾಗೂ ಮನೆಗಳು ಉರುಳಿಬಿದ್ದಿವೆ. ಇವುಗಳ ಅವಶೇಷಗಳ ಅಡಿ ಹಲವಾರು ಜನ ಸಿಲುಕಿ ಮೃತಪಟ್ಟಿದ್ದಾರೆ. ಶವಗಳನ್ನು ಹೊರ ತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ತಡರಾತ್ರಿ ಭೂಕಂಪದಿಂದ ಭೂಕಂಪ ಸಂಭವಿಸಿದೆ. 6.8 ರಷ್ಟು ತೀವ್ರತೆ ಹೊಂದಿದ್ದ. ಭೂಕಂಪದ ಕೇಂದ್ರಬಿಂದು ಮಾರಾಕೆಚ್‌ನ ನೈಋತ್ಯಕ್ಕೆ 72 ಕಿಮೀ ದೂರದಲ್ಲಿದೆ. ಭೂಕಂಪವು 18.5 ಕಿಮೀ ಆಳದಲ್ಲಿ ಆಗಿರುವುದು ದಾಖಲಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.
Advertisement. Scroll to continue reading.
