ಉಡುಪಿ: ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ಪಡೆದು ವಂಚಿಸಿದ ಪ್ರಕರಣದಲ್ಲಿ ಬಂಧನದಲ್ಲಿರುವ ಚೈತ್ರಾ ಕುಂದಾಪುರ ತಮ್ಮ ಭಾಷಣದಿಂದಲೇ ಖ್ಯಾತರಾಗಿದ್ದರು. ಅಲ್ಲದೇ, ಆಕೆ ಖ್ಯಾತಿ ಪಡೆಯಲು ಮತ್ತೊಂದು ಬಹು ಮುಖ್ಯವಾದ ಸಂಗತಿಯೊಂದಿದೆ. ಅದುವೇ ಆ ಒಂದು ಟ್ವೀಟ್….
ಹೌದು, ಚೈತ್ರಾ ಕುಂದಾಪುರ ಅವರ ಖ್ಯಾತಿಗೆ ಆ ಒಂದು ಟ್ವೀಟ್ ಪ್ರಮುಖ ಪಾತ್ರವಾಗಿತ್ತು.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ್ದರು ಆ ಟ್ವೀಟ್… ಒಂದೇ ಒಂದು ಟ್ವೀಟ್‌ನಿಂದ ಚೈತ್ರಾ ಕುಂದಾಪುರ ಅವರು ಫೇಮಸ್ ಆದರು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚೈತ್ರಾ ಕುಂದಾಪುರಳನ್ನು ‘ಡೇರಿಂಗ್ ಗರ್ಲ್’ ಎಂದಿದ್ದರು. 2018 ರಲ್ಲಿ ಚೈತ್ರಾ ಡೇರಿಂಗ್ ಕುರಿತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದರು.
ಚೈತ್ರಾ ಅಂದು ಕಾಂಗ್ರೆಸ್, ಎಡಪಕ್ಷಗಳ ಭಾರತ್ ಬಂದ್ ಅನ್ನು ವಿರೋಧಿಸಿದ್ದರು. ಉಡುಪಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಚೈತ್ರಾ ಜಗಳಕ್ಕಿಳಿದಿದ್ದರು. ಅಂಗಡಿ, ಮುಂಗಟ್ಟು ಬಂದ್ ಮಾಡುವ ವೇಳೆ ರಸ್ತೆಗಿಳಿದು ತರಾಟೆಗೆ ತೆಗೆದುಕೊಂಡಿದ್ದಳು. ಕಾಂಗ್ರೆಸ್ ವಿರುದ್ಧ ಒಬ್ಬಂಟಿಯಾಗಿ ಮಾಡಿದ ಹೋರಾಟದ ವಿಡಿಯೋ ಭಾರೀ ಸದ್ದು ಮಾಡಿತ್ತು. ಆ ಒಂದು ವೀಡಿಯೋ ಬಿಜೆಪಿ ವರಿಷ್ಠರ ಗಮನಕ್ಕೂ ಬಂದಿತ್ತು.
ವಿಡಿಯೋ ರೀಟ್ವೀಟ್ ಮಾಡಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚೈತ್ರಾ ಕುಂದಾಪುರಳನ್ನು ಹೊಗಳಿದ್ದರು ಇದು ಚೈತ್ರಾಳಿಗೆ ಪ್ಲಸ್ ಆಗಿತ್ತು.

