ನವದೆಹಲಿ: ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಪತ್ನಿ ಭಾರತೀಯ ಸಂಜಾತೆ ವಿನಿ ರಾಮನ್ ದಂಪತಿ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಮ್ಯಾಕ್ಸ್‌ವೆಲ್ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಶುಭಸುದ್ದಿಯನ್ನು ಮ್ಯಾಕ್ಸ್‌ವೆಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಗುವಿನ ಹುಟ್ಟಿದ ದಿನಾಂಕ ಮತ್ತು ಹೆಸರನ್ನು ಪೋಸ್ಟ್‌ನಲ್ಲಿ ಬಹಿರಂಗಪಡಿಸಿದ್ದಾರೆ.
ಮಗುವಿಗೆ ಲೋಗನ್ ಮಾವೆರಿಕ್ ಮ್ಯಾಕ್ಸ್‌ವೆಲ್ ಎಂದು ಹೆಸರಿಟ್ಟಿದ್ದಾರೆ.
Advertisement. Scroll to continue reading.

ತಮಿಳುನಾಡು ಮೂಲದ ವಿನಿ ರಾಮನ್ ಅವರನ್ನು ಮ್ಯಾಕ್ಸ್‌ವೆಲ್ 2022ರ ಮಾರ್ಚ್ 27 ರಂದು ವಿವಾಹವಾಗಿದ್ದರು. ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಇವರ ಮದುವೆ ಸಮಾರಂಭ ನಡೆದಿತ್ತು. ತಮಿಳಿನಲ್ಲಿ ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಿ ಗಮನ ಸೆಳೆದಿದ್ದರು.
ಅಲ್ಲದೇ, ಆರ್‌ಸಿಬಿ ಪ್ಲೇಯರ್ ಕೂಡ ಆಗಿರುವ ಮ್ಯಾಕ್ಸ್‌ವೆಲ್ ಕಳೆದ ತಿಂಗಳಷ್ಟೆ ಭಾರತೀಯ ಸಂಪ್ರದಾಯದಂತೆ ಪತ್ನಿಯ ಸೀಮಂತ ಮಾಡಿ ಗಮನ ಸೆಳೆದಿದ್ದರು.
Advertisement. Scroll to continue reading.
