ಕುಂದಾಪುರ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ, ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ, ಗ್ರಾಮ ಪಂಚಾಯತ್ ಹಂಗಳೂರು ಇವರ ಆಶ್ರಯದಲ್ಲಿ ಕೋಡಿ ಮತ್ತು ಹಂಗಳೂರು ಗ್ರಾಮ ಮಟ್ಟದ ಪೋಷಣ್ ಅಭಿಯಾನ್ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡಾಕೆರೆ ಹಂಗಳೂರು ಇಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಹಂಗಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ನೆರವೇರಿಸಿದರು.
ಈ ಸಂದರ್ಭದಲ್ಲಿ ಅನುರಾಧ ಹಾದಿಮನಿ (ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮಹಿಳಾ ಮತ್ತು ಮಕ್ಕಳ ಇಲಾಖೆ), ಸತೀಶ್ ಶೇರೆಗಾರ್ (ಉಪಾಧ್ಯಕ್ಷ, ಹಂಗಳೂರು ಪಂಚಾಯತ್), ಕಮಲ (ಪುರಸಭೆ ಸದಸ್ಯೆ, ಕುಂದಾಪುರ) ಲಕ್ಷ್ಮೀ ಮಂಜು ಬಿಲ್ಲವ (ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ), ಗ್ರಾಮ ಪಂಚಾಯತ್ ಸದಸ್ಯರುಗಳಾದ ಸುಧಾಕರ್ ಪೂಜಾರಿ, ರೋಶನ್ ಬರೆಟ್ಟೊ, ಆನಂದ ಪೂಜಾರಿ, ವನಜ, ಜನೆಟ್ ಮೆಂಡೊನ್ಸಾ, ಮಂಜು ಬಿಲ್ಲವ (ಮಾಜಿ ತಾಲೂಕು ಪಂಚಾಯತ್ ಸದಸ್ಯ), ಡಾ.ಉಮೇಶ್ ನಾಯಕ್ (ವೈದ್ಯಾಧಿಕಾರಿ ಕೋಡಿ), ಡಾ.ಸ್ವಾತಿ ಶೇಟ್, ಮಂಜುನಾಥ (ಪೋಷಣ್ ಅಭಿಯಾನ ತಾಲೂಕು ಸಂಯೋಜಕ), ಸುಜೇಯ (ಅಂಗನವಾಡಿ ಮೇಲ್ವಿಚಾರಕಿ), ರಾಜೇಶ್ ಸಿ.ಕೆ (ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ್ ಹಂಗಳೂರು), ಸೀತಾರಾಮ ಶೆಟ್ಟಿ (ಮುಖ್ಯೋಪಾಧ್ಯಾಯ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡಾಕೆರೆ), ಬಾಲವಿಕಾಸ ಸಮಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಸ್ತ್ರೀ ಶಕ್ತಿ ಸಂಘದವರು, ಸಂಜೀವಿನಿ ಸಂಘದ ಸದಸ್ಯರು,ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರು ಮೊದಲಾದವರು ಉಪಸ್ಥಿತರಿದ್ದರು.

ಬಡಕೆರೆ ಹಂಗಳೂರು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸುಜಯ ಸ್ವಾಗತಿಸಿದರು.
ಸರೋಜಿನಿ, ಸುಮಿತ್ರ ವಂದಿಸಿದರು.
ಕೆ. ರಾಮ (ದೈಹಿಕ ಶಿಕ್ಷಕ, ಬಡಕೆರೆ ಹಂಗಳೂರು) ಕಾರ್ಯಕ್ರಮ ನಿರೂಪಿಸಿದರು.