ಉಡುಪಿ : ಎಂಎಲ್‌ಎ ಟಿಕೆಟ್ ಪ್ರಕರಣದಲ್ಲಿ ಸಿಸಿಬಿಯಿಂದ ಬಂಧಿತರಾಗಿರುವ ಆರೋಪಿಗಳ ಮುಖಪರಿಚಯವೂ ಇಲ್ಲ. ಯಾವತ್ತೂ ಅವರ ಜೊತೆ ಮಾತನಾಡಿಲ್ಲ. ದೂರವಾಣಿಯಲ್ಲೂ ಮಾತನಾಡಿಲ್ಲ. ಆಕಸ್ಮಿಕವಾಗಿ ಶುಭ ಸಮಾರಂಭ, ಕಾರ್ಯಕ್ರಮಗಳಲ್ಲೂ ಭೇಟಿಯಾಗಿಲ್ಲ ಎಂದು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ವಂಚನೆ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದ ಹಿನ್ನೆಲೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಕರಣಕ್ಕೂ ನನಗೂ ಯಾವುದೇ ರೀತಿಯಲ್ಲೂ ಸಂಬಂಧ ಇಲ್ಲ. ಪ್ರಕರಣ ಸಂಬಂಧ ಯಾವುದೇ ರೀತಿಯ ವಿಚಾರಣೆಗೂ ನಾನು ಸಿದ್ಧನಿದ್ದೇನೆ ಎಂದಿದ್ದಾರೆ.
Advertisement. Scroll to continue reading.

ಬಿಜೆಪಿಯಲ್ಲಿ ಹಣದಿಂದ ಟಿಕೆಟ್ ಸಿಗುತ್ತೆ ಅನ್ನೋದು ಒಂದು ಭ್ರಮೆ. ಹಣದಿಂದ ಟಿಕೆಟ್ ಸಿಗುತ್ತಿದ್ದರೆ ನಾನು 4 ಬಾರಿ ಗೆದ್ದು ಬರಲು ಆಗುತ್ತಿರಲಿಲ್ಲ. ಬಿಜೆಪಿ, ರಾಜಕಾರಣಿ ಹೆಸರು ಹೇಳಿ ಅಪಮಾನ ಮಾಡುವರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಕೇಸ್‌ನ್ನು ಪೊಲೀಸ್ ಇಲಾಖೆ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಿ ಎಂದು ಆಗ್ರಹಿಸಿದ್ದಾರೆ.
In this article:Chaithra Kundapura, Diksoochi news, govinda babu Poojary, v Sunil Kumar

Click to comment