ದಿನಾಂಕ : ೧೭-೦೯-೨೩, ವಾರ : ಭಾನುವಾರ, ತಿಥಿ: ಬಿದಿಗೆ, ನಕ್ಷತ್ರ: ಹಸ್ತ
ನಿಮ್ಮ ಆರೋಗ್ಯದ ನಿರ್ಲಕ್ಷ್ಯ ಬೇಡ. ನಿಮ್ಮ ಕೆಲಸದಲ್ಲಿ ಪ್ರಶಂಸೆಯನ್ನು ಪಡೆಯುವಿರಿ. ಮನಸ್ಸಿನಲ್ಲಿ ಹೊಸ ಆಲೋಚನೆಗಳು ಮೂಡುತ್ತವೆ. ಮನೆಯ ಹಿರಿಯರ ಸಲಹೆ ಪಾಲಿಸಿ. ಕಾನೂನು ವಿಷಯಗಳಲ್ಲಿ ಗೆಲುವು. ನಾಗಾರಾಧನೆ ಮಾಡಿ.
ನಿಮ್ಮ ಕೆಲಸದ ದಕ್ಷತೆ ಹೆಚ್ಚಾಗಲಿದೆ. ಕುಟುಂಬದೊಂದಿಗೆ ಸುತ್ತಾಡಲು ಹೋಗಬಹುದು. ನಿಮ್ಮ ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲಿತಾಂಶವನ್ನು ತಡವಾಗಿ ಪಡೆಯುತ್ತೀರಿ. ರಾಮನ ನೆನೆಯಿರಿ.

ನಿಮ್ಮ ಕಠಿಣ ಪರಿಶ್ರಮಕ್ಕೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ನಕಾರಾತ್ಮಕ ಸುದ್ದಿಗಳನ್ನು ಪಡೆಯಬಹುದು. ಕೆಲಸದ ಒತ್ತಡ ನಿಮ್ಮನ್ನು ಕಾಡಲಿದೆ. ಧಾರ್ಮಿಕ ಆಸಕ್ತಿ ಬೆಳೆಯಲಿದೆ. ಅನಗತ್ಯ ಖರ್ಚುಗಳನ್ನು ತಡೆಯಲು ಪ್ರಯತ್ನಿಸುವಿರಿ. ಲಕ್ಷ್ಮಿಯ ಆರಾಧಿಸಿ.
ಪಾಲುದಾರಿಕೆಗೆ ಸಂಬಂಧಿಸಿದ ಕೆಲಸದಲ್ಲಿ ಯಶಸ್ಸು ಇರುತ್ತದೆ. ಮನಸ್ಸಿನಲ್ಲಿ ಸಕಾರಾತ್ಮಕ ಯೋಚನೆ. ದೊಡ್ಡ ವ್ಯವಹಾರಕ್ಕೆ ಕೈ ಹಾಕುವಿರಿ. ದೂರ ಪ್ರಯಾಣ ಸಾಧ್ಯತೆ ಕಡಿಮೆ. ಶಿವನ ಆರಾಧಿಸಿ.
ವೈವಾಹಿಕ ಸಂಬಂಧಗಳಿಗೆ ಸಂಬಂಧಿಸಿದಂತೆ ನೀವು ಸ್ವಲ್ಪ ಒತ್ತಡ ಇರಲಿದೆ. ಮಾತಿನ ವೇಳೆ ಜಾಗರೂಕರಾಗಿರಿ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯುವಿರಿ. ರಾಮನ ನೆನೆಯಿರಿ.
ನೀವು ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುತ್ತೀರಿ. ಗೌರವ ಹೆಚ್ಚಾಗಲಿದೆ. ಇತರರ ಕೆಲಸದಲ್ಲಿ ಹಸ್ತಕ್ಷೇಪ ಮಾಡಬೇಡಿ. ಹಿರಿಯರಿಂದ ಮಾರ್ಗದರ್ಶನ ಪಡೆಯುವಿರಿ. ವೈವಾಹಿಕ ಜೀವನವು ತುಂಬಾ ಆಹ್ಲಾದಕರವಾಗಿರುತ್ತದೆ. ವಿಷ್ಣುವನ್ನು ನೆನೆಯಿರಿ.

ಜನರು ನಿಮ್ಮ ನಡವಳಿಕೆಯ ಕುರಿತು ಅಸಮಾಧಾನ ಹೊರ ಹಾಕಬಹುದು. ಯೋಜನೆ ಹಾಕಿಕೊಂಡು ಕೆಲಸ ಮಾಡುವುದು ಸೂಕ್ತ. ಕೆಲವರು ನಿಮ್ಮನ್ನು ಕೆರಳಿಸಲು ಪ್ರಯತ್ನಿಸುತ್ತಾರೆ. ತಾಳ್ಮೆ ಇರಲಿ. ತರಾತುರಿಯಲ್ಲಿ ಯಾವುದೇ ಕೆಲಸ ಮಾಡಬೇಡಿ. ಶಿವನ ಆರಾಧಿಸಿ.
ನಿಮ್ಮ ಯಾವುದೇ ಪ್ರಮುಖ ಚಿಂತೆಯು ಪರಿಹಾರವಾಗಲಿದೆ. ವೃತ್ತಿಯಲ್ಲಿ ಉನ್ನತ ಸ್ಥಾನ ಸಿಗಲಿದೆ. ರಾಜಕೀಯಕ್ಕೆ ಸಂಬಂಧಿಸಿದ ಜನರ ಸಮಸ್ಯೆಗಳನ್ನು ಪರಿಹರಿಸಬಹುದು. ದೂರದ ಪ್ರಯಾಣ ಮಾಡಬಹುದು. ಮಂಜುನಾಥನ ನೆನೆಯಿರಿ.
ಕೌಟುಂಬಿಕ ಜೀವನ ತುಂಬಾ ಉತ್ತಮವಾಗಿರಲಿದೆ. ನೀವು ಕೆಲಸದ ಸ್ಥಳದಲ್ಲಿ ಬಡ್ತಿ ಪಡೆಯಬಹುದು. ವ್ಯವಹಾರದಲ್ಲಿ ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ. ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ಸಂಗಾತಿಗೆ ಸಮಯ ನೀಡಿ. ಗಣಪನ ನೆನೆಯಿರಿ.
ಸರ್ಕಾರಿ ಕೆಲಸದಲ್ಲಿ ಸ್ವಲ್ಪ ತೊಂದರೆ ಅನುಭವಿಸುವಿರಿ. ನೀವು ಅಪಾಯಕಾರಿ ಚಟುವಟಿಕೆಗಳನ್ನು ತಪ್ಪಿಸಿ. ಹೊಸ ಕಾರ್ಯಗಳ ಬಗ್ಗೆ ಸ್ವಲ್ಪ ಚಿಂತಿಸುವಿರಿ. ಇಂದು ಸಾಲ ನೀಡುವುದನ್ನು ತಪ್ಪಿಸಿದರೆ ಉತ್ತಮ. ಶನೈಶ್ಚರನ ನೆನೆಯಿರಿ.

ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಕಷ್ಟ ಪಡುವಿರಿ. ಇತರರ ಅವಲಂಬನೆಯಿಂದ ನೀವು ನಷ್ಟ ಅನುಭವಿಸಬಹುದು. ಉತ್ಸಾಹ ಮತ್ತು ಕೋಪದಲ್ಲಿ ತಪ್ಪು ಪದಗಳನ್ನು ಬಳಸದಿರಿ. ಸಂಜೆ ಮನೆಯಲ್ಲಿ ಹಿರಿಯರಿಂದ ಪ್ರಶಂಸೆ ಪಡೆಯಬಹುದು. ಗುರುವ ನೆನೆಯಿರಿ.
ವ್ಯಾಪಾರಕ್ಕಾಗಿ ಪ್ರಯಾಣ ಸಾಧ್ಯತೆ. ಸಂಗಾತಿಯೊಂದಿಗಿನ ಸಂಬಂಧವು ಗಟ್ಟಿಯಾಗುತ್ತದೆ. ಸಾಹಿತ್ಯದ ಕಡೆಗೆ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ರಾಯರ ಆರಾಧಿಸಿ.
