ಏಷ್ಯಾಕಪ್ 2023 : ಸಿರಾಜ್ ಮಾರಕ ದಾಳಿಯಿಂದ ಏಷ್ಯಾಕಪ್ ಫೈನಲ್‌ನಲ್ಲಿ ಲಂಕಾ ತಂಡ ಕೇವಲ 50 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಈ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿದ್ದು, ಅವು ಹೀಗಿವೆ…
- ಇಂದಿನ ಪಂದ್ಯದಲ್ಲಿ 50ರನ್‌ಗೆ ಆಲೌಟ್ ಆಗುವ ಮೂಲಕಭಾರತ ವಿರುದ್ಧ ಅತೀ ಕಡಿಮೆ ಮೊತ್ತ ಪೇರಿಸಿದ ತಂಡ ಎಂಬ ಕೆಟ್ಟ ದಾಖಲೆ ಶ್ರೀಲಂಕಾ ಪಾಲಾಯಿತು.
- ಇದಕ್ಕೂ ಮೊದಲು ಬಾಂಗ್ಲಾದೇಶ 58 ರನ್‌ಗೆ ಆಲೌಟ್ ಆಗಿದ್ದು ದಾಖಲೆ ಯಾಗಿತ್ತು.
- ಏಕದಿನ ಟೂರ್ನಿಯ ಫೈನಲ್‌ನಲ್ಲಿ ದಾಖಲಾದ ಕಡಿಮೆ ಮೊತ್ತ ಎಂಬ ದಾಖಲೆ ಕೂಡ ಈ ಪಂದ್ಯದಲ್ಲಿ ನಿರ್ಮಾಣವಾಯಿತು.
ಇದಕ್ಕೂ ಮೊದಲು ಭಾರತ, ಶ್ರೀಲಂಕಾ ವಿರುದ್ಧ 54ರನ್ ಪೇರಿಸಿದ್ದು ದಾಖಲೆಯಾಗಿತ್ತು. - ಸಿರಾಜ್ ಅವರ 6/21 ವಿಕೆಟ್ ಎನ್ನುವುದು ಭಾರತದ ಪರ ಏಕದಿನದ ನಾಲ್ಕನೇ ಅತ್ಯುತ್ತಮ ಪ್ರದರ್ಶನವಾಗಿದೆ.
ಉಳಿದಂತೆ ಸ್ಟುವರ್ಟ್ ಬಿನ್ನಿ ಬಾಂಗ್ಲಾ ವಿರುದ್ಧ 4ರನ್‌ಗೆ 6 ವಿಕೆಟ್, ಕುಂಬ್ಳೆ, ವಿಂಡೀಸ್ ವಿರುದ್ಧ 12 ರನ್‌ಗೆ 6 ವಿಕೆಟ್, ಬುಮ್ರಾ, ಇಂಗ್ಲೆಂಡ್ ವಿರುದ್ಧ 19 ರನ್‌ಗೆ 6 ವಿಕೆಟ್ ಪಡೆದಿರುವುದು ದಾಖಲೆಯಾಗಿದೆ. - ಸಿರಾಜ್ 21 ರನ್‌ಗೆ 6 ವಿಕೆಟ್ ಎನ್ನುವುದು ಶ್ರೀಲಂಕಾ ವಿರುದ್ಧ ಬೌಲರದ ಒಬ್ಬನ ಶ್ರೇಷ್ಠ ಸಾಧನೆಯಾಹಗಿದೆ. ಈ ಮೂಲಕ ವಕಾರ್ ಯೂನಿಸ್ (26 ರನ್‌ಗೆ 6 ವಿಕೆಟ್) ದಾಖಲೆ ಪತನವಾಯಿತು.
- ಇದು ಶ್ರೀಲಂಕಾದ ಎರಡನೇ ಕನಿಷ್ಠ ಏಕದಿನ ಮೊತ್ತವಾಗಿದೆ. ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾ ವಿರುದ್ಧ 43 ರನ್‌ಗೆ ಆಲೌಟ್ ಆಗಿದ್ದು ಲಂಕಾದ ಕನಿಷ್ಠ ಏಕದಿನ ಮೊತ್ತವಾಗಿದೆ.
- ಐಸಿಸಿ ಫುಲ್ ಮೆಂಬರ್ ತಂಡ ಅತ್ಯಂತ ಕಡಿಮೆ ಓವರ್‌ನಲ್ಲಿ ಆಲೌಟ್ ಆದ ಎರಡನೇ ತಂಡ ಎಂಬ ಕುಖ್ಯಾತಿ ಶ್ರೀಲಂಕಾ ಪಾಲಾಯಿತು. ಲಂಕಾ ಈ ಪಂದ್ಯದಲ್ಲಿ 15.2 ಓವರ್‌ನಲ್ಲಿ ಆಲೌಟ್ ಆಯಿತು.
2017ರಲ್ಲಿ ಜಿಂಬಾಬ್ವೆ, ಆಫ್ಘಾನಿಸ್ತಾನದ ವಿರುದ್ಧ 13.5 ಓವರ್‌ಗಳಲ್ಲಿ ಆಲೌಟ್ ಆಗಿರುವುದು ದಾಖಲೆ.
Advertisement. Scroll to continue reading.

In this article:asia, Bharath, Diksoochi news, diksoochi Tv, diksoochi udupi, Ind vs SL, Mohammad siraj, shreelanka

Click to comment