ಬೆಂಗಳೂರು : ಇತ್ತೀಚೆಗೆ ಸೈಬರ್ ಕ್ರೈಂಗಳು ಹೆಚ್ಚಾಗುತ್ತಿವೆ. ಸೈಬರ್ ಕಳ್ಳರಿಂದ ಹಲವರು ಹಣ ಕಳೆದುಕೊಂಡಿದ್ದಾರೆ. ಇದೀಗ ಮತ್ತೊಂದು ಪ್ರಕರಣ ವರದಿಯಾಗಿದೆ. ಬೆಂಗಳೂರಿನ ಮಹಿಳೆಯೊಬ್ಬರು 3.30 ಲಕ್ಷ ರೂ.ಕಳೆದುಕೊಂಡಿದ್ದಾರೆ.
ಹೌದು, ಅಮೃತಹಳ್ಳಿ ನಿವಾಸಿ ಮಹಿಳೆಯೊಬ್ಬರು ಈ ವಂಚನೆಗೆ ಗುರಿಯಾಗಿದ್ದಾರೆ.
ಸೆಪ್ಟೆಂಬರ್ 12 ರಂದು ಅಂಬಿಕಾ ಅವರ ವಾಟ್ಸಾಪ್ ಸಂಖ್ಯೆಗೆ ಪರಿಚಯವಿಲ್ಲದ ನಂಬರಿಂದ ಅಧಿಕೃತ ಸಂದೇಶ ಬಂದಿದ್ದು, ಆಕೆಯ ಬ್ಯಾಂಕ್ ಖಾತೆಯನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಒದಗಿಸಿದ ಲಿಂಕ್ ಅನ್ನು ಕ್ಲಿಕ್ ಮಾಡುವಂತೆ ಸಂದೇಶದಲ್ಲಿ ಬರೆದಿತ್ತು. ಸಂದೇಶವು ತನ್ನ ಬ್ಯಾಂಕ್‌ನಿಂದ ನಿಜವಾಗಿ ಬಂದಿದೆ ಎಂದು ಭಾವಿಸಿ, ಅಂಬಿಕಾ ಲಿಂಕ್ ಅನ್ನು ಕ್ಲಿಕ್ ಮಾಡಿದ್ದಾರೆ.
ಆದರೆ, ಅಷ್ಟರಲ್ಲೇ ಆಕೆಯ ಬ್ಯಾಂಕ್ ಖಾತೆಯಿಂದ ಸೈಬರ್ ಕಳ್ಳರು 3.30 ಲಕ್ಷ ರೂ. ಎಗರಿಸಿದ್ದಾರೆ. ಹಣ ಕಡಿತದಿಂದ ಗಾಬರಿಗೊಂಡ ಅಂಬಿಕಾ ಅವರು ಸ್ಪಷ್ಟೀಕರಣವನ್ನು ಪಡೆಯಲು ತಮ್ಮ ಬ್ಯಾಂಕ್ ಸಿಬ್ಬಂದಿಯನ್ನು ಸಂಪರ್ಕಿಸಿದ್ದಾರೆ.
ಆಗ ಆಕೆ ವಂಚನೆಗೆ ಬಲಿಯಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
