Connect with us

Hi, what are you looking for?

ಕರಾವಳಿ

ವಿದ್ಯಾಭಾರತಿ ಕರ್ನಾಟಕ ಉಡುಪಿ : ಸಂಘ ಪರಿಚಯ ವರ್ಗ ಸಂಪನ್ನ

0

ಉಡುಪಿ : ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಸಂಘ ಪರಿಚಯ ವರ್ಗ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ನಡೆಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಉಡುಪಿ ಜಿಲ್ಲೆಯ ಜಿಲ್ಲಾ ಸಂಘ ಚಾಲಕ ನಾರಾಯಣ ಶಣೈ ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.

Advertisement. Scroll to continue reading.


ಬಳಿಕ ಮಾತನಾಡಿದ ಅವರು, ಸಮಾಜದಲ್ಲಿ ವ್ಯಕ್ತಿ ನಿರ್ಮಾಣದ ಕಾರ್ಯ ಸಂಘದ ಮೂಲಕ ಆಗುತ್ತಿದೆ .ಶಿಕ್ಷಕರಾದ ನಾವು ಸಂಘದ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕು. ಶಿಕ್ಷಕರು ವಿದ್ಯಾರ್ಥಿಗಳನ್ನು ಮುಂದಿನ ಸಮಾಜದ ಮೇಲೆ ನಿತ್ಯ ನೆರಳು ಬೀರುವ ವ್ಯಕ್ತಿಯಾಗಿ , ಸುಸಂಸ್ಕೃತ ವ್ಯಕ್ತಿಯಾಗಿ ಬಾಳಬೇಕೆಂದು ಆದರ್ಶ ಗುಣವನ್ನು ಬೆಳೆಸಬೇಕೆಂದು ರಾಷ್ಟ್ರಭಕ್ತಿಯನ್ನು ಬೆಳೆಸಬೇಕು ಎಂದರು.


ಕಾರ್ಯಗಾರದ ಎರಡನೇ ಅವಧಿಯನ್ನು ಹಿರಿಯ ಪ್ರಚಾರ, ರಾಷ್ಟ್ರೀಯ ಸ್ವಯಂಸೇವಕ ಸಂಘ .ದಾ.ಮ. ರವೀಂದ್ರ ಇವರು ನೀಡಿದರು.

ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ , ಸಂಘದ ಸಂಸ್ಕಾರ ಸಂಸ್ಕೃತಿ ದೇಶದ ಸಂಸ್ಕಾರ ಸಂಸ್ಕೃತಿ ಯಾಗಿದೆ , ದೊಡ್ಡ ವಿಷಯವನ್ನು ಗುರಿಯಾಗಿಟ್ಟುಕೊಂಡು ಇತರರ ಬಾಳಿಗೆ ಬೆಳಗಾಗಬೇಕು ಎಂದು ಹೇಳಿದರು .


ಮೂರನೇ ಅವಧಿಯನ್ನು ಪ್ರಾಂತ ಸಹ ಸೇವಾ ಪ್ರಮುಖ್ ರಾಷ್ಟ್ರೀಯ ಸ್ವಯಂಸೇವಕ ಸಂಘ ನ.ಸೀತಾರಾಮ ಇವರು ” ಸೇವೆ ಮತ್ತು ಸಾಮಾಜಿಕ ಪರಿವರ್ತನೆ ” ಎಂಬ ವಿಷಯದ ಅಡಿ ಮಾತನಾಡಿದರು.
ನಮ್ಮ ದೇಶದ ಗುರುತು ಸೇವೆ ಮತ್ತು ಸಮರ್ಪಣೆ .ಜಗತ್ತಿನ ಮುಂದೆ ಭಾರತದ ಗುರುತು ಇದಾಗಿದೆ. ಸೇವೆಯಿಂದ ಆತ್ಮತೃಪ್ತಿ ಉಂಟಾಗುತ್ತದೆ. ಸಾಮಾಜಿಕ ಸೇವಾ ಮಾನಸಿಕತೆಯನ್ನು ಸಂಘ ನೀಡುತ್ತದೆ ಎಂದು ಹೇಳಿದರು.


ಮಧ್ಯಾಹ್ನದ ನಾಲ್ಕನೇ ಅವಧಿಯನ್ನು ಅಧ್ಯಕ್ಷರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಇವರು ಸಮಾರೋಪ ಬೌದ್ಧಿಕ ನೀಡಿದರು.
” ಕಾರ್ಯಕರ್ತ ಧ್ಯೇಯ ಸಾಧನೆ ” ಎಂಬ ವಿಷಯದ ಕುರಿತು ಮಾತನಾಡಿದರು.

Advertisement. Scroll to continue reading.


ಕಾರ್ಯಕ್ರಮದ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಯನ್ನು ಅಮೃತ ಭಾರತಿ ಟ್ರಸ್ಟಿನ ಕಾರ್ಯದರ್ಶಿ ಗುರುದಾಸ ಶೆಣೈ ನೆರವೇರಿಸಿದರು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಶಾರೀರಿಕ ಪ್ರಮುಖ್ ವಿಜಯಕುಮಾರ ಶೆಟ್ಟಿ ಮತ್ತು ಭಾರತ ಕರ್ನಾಟಕ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಮಹೇಶ್ ಹೈಕಾಡಿ ನಿರೂಪಿಸಿದರು.


ವಿದ್ಯಾಭಾರತಿ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳಾದ ಆರ್. ಕೆ.ಪಾಟ್ಕರ್ ಶಾರದಾ ಹಿರಿಯ ಪ್ರಾಥಮಿಕ ಶಾಲೆ ಮುಂಡಕ್ಕಿನ ಜಡ್ಡು, ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಕುತ್ತ್ಯಾರು, ಶ್ರೀ ಗಣಪತಿ ಕಿರಿಯ ಪ್ರಾಥಮಿಕ ಶಾಲೆ ಪಟ್ಲಾ , ಪಿ.ಆರ್.ಎನ್.ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆ ಹೆಬ್ರಿ ಗುರೂಜಿ ಮಾತಾಜಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಮೃತ ಭಾರತಿ ಟ್ರಸ್ಟಿನ ಸದಸ್ಯರು ವಿಷ್ಣುಮೂರ್ತಿ ನಾಯಕ್, ಬಾಲಕೃಷ್ಣ ಮಲ್ಯ , ರೇಷ್ಮಾ ಗುರುದಾಸ ಶೆಣೈ ಹೆಬ್ರಿ, ಸಂಘದ ಕಾರ್ಯಕರ್ತ ಸುಧೀರ್ ಹೆಬ್ರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕ್ರೀಡೆ

1 ಚೀನಾ : ಹಾಂಗ್ ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟಲ್ಲಿ ಭಾರತಕ್ಕೆ ಮೊದಲ ಚಿನ್ನ ಬಂದಿದೆ. ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಏರ್ ರೈಫಲ್ ಶೂಟಿಂಗ್ ತಂಡ ಚಿನ್ನದ ಪದಕ ಗೆದ್ದಿದೆ. 10...

ಕರಾವಳಿ

0 ‍‌‌ಹಾವಂಜೆ : ಇಲ್ಲಿನ ಅಂಗಡಿಬೆಟ್ಟುವಿನ ಕಪ್ಪೆಟ್ಟು ಪ್ರಸಾದ್ ಶೆಟ್ಟಿ ಅವರ ಮನೆಯ ಕಂಪೌಂಡ್‌ಗೆ ತಾಗಿ ರಸ್ತೆಯ ಮಧ್ಯದಲ್ಲಿ ಹೊಂಡವೊಂದು ಕಳೆದ ಒಂದು ತಿಂಗಳ ಹಿಂದೆಯೇ ಕಂಡುಬಂದಿದ್ದರೂ ಪ್ರಮುಖ ರಸ್ತೆ ಯಾಗಿರುವುದರಿಂದ, ಸ್ಥಳೀಯ...

ಕರಾವಳಿ

0 ಬೆಳ್ತಂಗಡಿ: ಮನೆಯ ಸಮೀಪದಲ್ಲಿದ್ದ ಮರವನ್ನು ಕಡಿಯುವ ವೇಳೆ ಆಕಸ್ಮಿಕವಾಗಿ ಮೈ ಮೇಲೆ ಮರ ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಬೆಳ್ತಂಗಡಿ ತಾಲೂಕಿನ ನಿಡ್ಲೆ...

ಕರಾವಳಿ

0 ಉಡುಪಿ : ಉಡುಪಿ ಜಿಲ್ಲೆಯಲ್ಲಿರುವ ವಿಕಲಚೇತನರು ಮತ್ತು ಹಿರಿಯ ನಾಗರೀಕರ ಕುರಿತಂತೆ ವ್ಯವಸ್ಥಿತವಾಗಿ ಸಮಗ್ರ ನಡೆಸಿ, ಅವರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಾಧನ ಸಲಕರಣಗಳನ್ನು ಅಲಿಂಕೋ ಮೂಲಕ ಸಂಪೂರ್ಣ ಉಚಿತವಾಗಿ ವಿತರಿಸಲಾಗುವುದು...