Connect with us

Hi, what are you looking for?

ಕರಾವಳಿ

ಬ್ರಹ್ಮಾವರ : ಜಗತ್ತಿನ ಮೊದಲ ಇಂಜಿನಿಯರ್ ವಿಶ್ವಕರ್ಮ

0

ವರದಿ : ಬಿ.ಎಸ್.ಆಚಾರ್ಯ


ಬ್ರಹ್ಮಾವರ: ಕೋಟ ಶ್ರೀ ವಿರಾಡ್ವಿಶ್ವಬ್ರಾಹಣ ಸಮಾಜೋದ್ಧಾರಕ ಸಂಘ ವಿಶ್ವ ಕರ್ಮ ಕಲಾವೃಂದ , ವಿಶ್ವಜ್ಯೋತಿ ಮಹಿಳಾ ಬಳಗದ ವತಿಯಿಂದ ವಿಶ್ವಕರ್ಮ ಸಾಂಸ್ಕೃತಿಕ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಮಣೂರು ಸುಬ್ರಾಯ ಆಚಾರ್ಯ ದಂಪತಿಗಳ ಸಂಕಲ್ಪ ಪೂಜೆಯೊಂದಿಗೆ ಭಾನುವಾರ ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವ ಜರುಗಿತು.


ಬ್ರಹ್ಮಾವರ ತಾಲೂಕು ಪ್ರಭಾರ ತಹಶೀಲ್ದಾರ ಶೋಭಾ ಲಕ್ಷ್ಮೀ ಈ ಸಂದರ್ಭ ದೀಪ ಬೆಳಗಿ ಪಂಚಮುಖಿ ವಿಶ್ವಕರ್ಮ ದೇವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮಿಸಿದರು.


ಬಳಿಕ ಅವರು ಮಾತನಾಡಿ, ಜಗತ್ತಿನ ಮೊದಲ ಇಂಜಿನಿಯರ್ ವಿಶ್ವಕರ್ಮ. ಇಂದು ನಾವು ಚಂದ್ರ ಯಾನದಂತ ಸಾಧನೆಗೆ ದೇವಶಿಲ್ಪಿ ವಿಶ್ವಕರ್ಮ ಪರಬ್ರಹ್ಮನ ಒಂದು ಅಂಶ. ದ್ವಾರಕಾ ನಗರ, ಪುಷ್ಪಕ ವಿಮಾನಗಳು ಪ್ರಾಚೀನ ಯುಗದಲ್ಲಿ ಮಾಡಿದ ಉದಾಹರಣೆ ಇದೆ ಎಂದರು.

Advertisement. Scroll to continue reading.


ಇದೇ ಸಂದರ್ಭದಲ್ಲಿ ತಹಶಿಲ್ದಾರರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಸಂಘದ ಗೌರವಾಧ್ಯಕ್ಷ ಜನಾರ್ದನ ಆಚಾರ್ಯ ಚೇಂಪಿ, ಐರೋಡಿ ಕೇಶವ ಆಚಾರ್ಯ, ರಮೇಶ್ ಆಚಾರ್ಯ ಚೇಂಪಿ, ವೆಂಕಟೇಶ್ ಆಚಾರ್ಯ, ಸವಿತಾ ಚಂದ್ರ ಶೇಖರ ಆಚಾರ್ಯ, ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

You May Also Like

ಕ್ರೀಡೆ

1 ಚೀನಾ : ಹಾಂಗ್ ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟಲ್ಲಿ ಭಾರತಕ್ಕೆ ಮೊದಲ ಚಿನ್ನ ಬಂದಿದೆ. ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಏರ್ ರೈಫಲ್ ಶೂಟಿಂಗ್ ತಂಡ ಚಿನ್ನದ ಪದಕ ಗೆದ್ದಿದೆ. 10...

ಕರಾವಳಿ

0 ‍‌‌ಹಾವಂಜೆ : ಇಲ್ಲಿನ ಅಂಗಡಿಬೆಟ್ಟುವಿನ ಕಪ್ಪೆಟ್ಟು ಪ್ರಸಾದ್ ಶೆಟ್ಟಿ ಅವರ ಮನೆಯ ಕಂಪೌಂಡ್‌ಗೆ ತಾಗಿ ರಸ್ತೆಯ ಮಧ್ಯದಲ್ಲಿ ಹೊಂಡವೊಂದು ಕಳೆದ ಒಂದು ತಿಂಗಳ ಹಿಂದೆಯೇ ಕಂಡುಬಂದಿದ್ದರೂ ಪ್ರಮುಖ ರಸ್ತೆ ಯಾಗಿರುವುದರಿಂದ, ಸ್ಥಳೀಯ...

ಕರಾವಳಿ

0 ಬೆಳ್ತಂಗಡಿ: ಮನೆಯ ಸಮೀಪದಲ್ಲಿದ್ದ ಮರವನ್ನು ಕಡಿಯುವ ವೇಳೆ ಆಕಸ್ಮಿಕವಾಗಿ ಮೈ ಮೇಲೆ ಮರ ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಬೆಳ್ತಂಗಡಿ ತಾಲೂಕಿನ ನಿಡ್ಲೆ...

ಕರಾವಳಿ

0 ಉಡುಪಿ : ಉಡುಪಿ ಜಿಲ್ಲೆಯಲ್ಲಿರುವ ವಿಕಲಚೇತನರು ಮತ್ತು ಹಿರಿಯ ನಾಗರೀಕರ ಕುರಿತಂತೆ ವ್ಯವಸ್ಥಿತವಾಗಿ ಸಮಗ್ರ ನಡೆಸಿ, ಅವರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಾಧನ ಸಲಕರಣಗಳನ್ನು ಅಲಿಂಕೋ ಮೂಲಕ ಸಂಪೂರ್ಣ ಉಚಿತವಾಗಿ ವಿತರಿಸಲಾಗುವುದು...