ದಿನಾಂಕ : ೧೯-೦೯-೨೩, ವಾರ : ಮಂಗಳವಾರ, ತಿಥಿ: ಚೌತಿ, ನಕ್ಷತ್ರ: ಸ್ವಾತಿ
ಕೆಲಸದ ವಿಚಾರದಲ್ಲಿ ಆತುರತೆ ಬೇಡ. ಆಯಾಸ ಹೆಚ್ವಲಿದೆ. ವಿಶ್ರಾಂತಿಯೂ ಅಗತ್ಯ. ಆಸ್ತಿ ಖರೀದಿಗೆ ಸಕಾಲ. ಶಿವನ ಆರಾಧಿಸಿ.
ಅನಗತ್ಯ ಆರೋಪಗಳನ್ನು ಎದುರಿಸಬೇಕಾದಿತು. ಕೆಲಸಗಳಲ್ಲಿ ಯಾವುದೇ ಅಡೆ ತಡೆಗಳು ಇರದು. ಪ್ರಯಾಣದ ವೇಳೆ ಎಚ್ಚರ ಅಗತ್ಯ. ನಾಗಾರಾಧನೆ ಮಾಡಿ.

ಧನಾತ್ಮಕ ಯೋಚನೆಗಳಿಂದ ಮುಂದುವರೆಯಿರಿ. ನಡವಳಿಕೆ ಉತ್ತಮವಾಗಿರಲಿ. ಮನೋಲ್ಲಾಸದಿಂದ ಇಂದು ಇರುವಿರಿ. ರಾಮನ ನೆನೆಯಿರಿ.
ಒಬ್ಬಂಟಿಯಾಗಿರಲು ಮನಸ್ಸು ಬಯಸುವುದು. ಕೆಲಸ ವಿಚಾರದಲ್ಲೂ ಎಚ್ಚರ ವಹಿಸಿ. ನಿಮ್ಮ ಪ್ರತಿಭೆಗೆ ಉತ್ತಮ ಅವಕಾಶ. ದೇವಿಯ ನೆನೆಯಿರಿ.
ಸಂಗಾತಿಯೊಂದಿಗೆ ತಾಳ್ಮೆಯಿಂದ ಇರುವುದು ಉತ್ತಮ. ಆರೋಗ್ಯದ ವಿಚಾರದಲ್ಲೂ ಎಚ್ಚರ ವಹಿಸಿದರೆ ಉತ್ತಮ. ಅಧಿಕ ಖರ್ಚು ತಲೆದೋರಲಿದೆ. ರಾಮನ ನೆನೆಯಿರಿ.
ಯಾವುದೇ ವಿಚಾರದಲ್ಲೂ ಒತ್ತಡ ಬೇಡ. ತಾಳ್ಮೆಯಿಂದ ಇರುವುದು ಉತ್ತಮ. ಕುಟುಂಬದ ವಿಚಾರದಲ್ಲಿ ಚಿಂತೆ. ವಿಷ್ಣುವನ್ನು ನೆನೆಯಿರಿ.

ಅನಾರೋಗ್ಯ ಕಾಡುವ ಸಾಧ್ಯತೆ ಇದೆ. ನಿಮ್ಮ ಶ್ರೇಯೋಭಿವೃದ್ಧಿಗೆ ನೀವು ಶ್ರಮಿಸಬೇಕು. ಹೆಚ್ಚುವರಿ ಶ್ರಮವಹಿಸುವುದು ಉತ್ತಮ. ಶಿವನ ಆರಾಧಿಸಿ.
ವ್ಯಾಪಾರದ ವಿಚಾರದಲ್ಲಿ ಹೊಸ ಚಿಂತನೆಗಳು ಸಹಾಯಕವಾಗಿ ಪರಿಣಮಿಸಲಿವೆ. ಸಹೋದ್ಯೋಗಿಗಳೊಂದಿಗೆ ಸಾಮರಸ್ಯದಿಂದ ಇರುವುದು ಉತ್ತಮ. ಭೋಗ ವಸ್ತುಗಳಿಗೆ ಖರ್ಚು ಮಾಡುವಿರಿ. ಮಂಜುನಾಥನ ನೆನೆಯಿರಿ.
ದಿನದ ಆರಂಭದವು ಉತ್ತಮವಾಗಿರಲಿದೆ. ಇಂದು ಹಳೆ ಹೂಡಿಕೆಯಿಂದ ದಿಢೀರ್ ಲಾಭ ಇರಲಿದೆ. ದೂರ ಪ್ರಯಾಣ ಇರಲಿದೆ. ರಾಯರ ಆರಾಧಿಸಿ.
ಕೆಲಸದ ಸ್ಥಳದಲ್ಲಿ ತಾಳ್ಮೆಯಿಂದ ಇರುವುದು ಉತ್ತಮ. ಮನೆಯ ಖರ್ಚು ಅಧಿಕವಾಗಿರಲಿದೆ. ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ಶನೈಶ್ಚರನ ನೆನೆಯಿರಿ.

ಹಣಕಾಸು ವಿಚಾರದಲ್ಲಿ ಲಾಭ ಇರಲಿದೆ. ಮಾತಿನಲ್ಲಿ ಹಿಡಿತವಿದ್ದಷ್ಟು ಉತ್ತಮ. ನೆರೆ ಹೊರೆಯವರೊಂದಿಗೆ ಮನಸ್ತಾಪ. ಗುರುವ ನೆನೆಯಿರಿ.
ಇತರರನ್ನು ಅವಮಾನಿಸುವ ಕಾರ್ಯ ಮಾಡದಿರಿ. ಶತ್ರುಗಳ ವಿಚಾರದಲ್ಲಿ ಎಚ್ಚರ ಅಗತ್ಯ. ಆರೋಗ್ಯ ಸಮಸ್ಯೆ ಇರಲಿದೆ. ಗಣಪನ ನೆನೆಯಿರಿ.
