ಉಡುಪಿ : ರಾಗ ಧನ ಉಡುಪಿ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಕೊಡ ಮಾಡುವ ಕಲಾವಿಹಾರಿ ಶ್ರೀ ಎ. ಈಶ್ವರಯ್ಯ ಸ್ಮಾರಕ ಕಲಾಪ್ರವೀಣ ಪ್ರಶಸ್ತಿಗೆ ಪ್ರೊ.ಮುರಳೀಧರ ಉಪಾಧ್ಯ, ಹಿರಿಯಡಕ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಸೆ.24 ರಂದು ಹಿರಿಯಡಕ, ಕುಕ್ಕೆಹಳ್ಳಿ ಕನಸು ಆಶ್ರಯ ತಾಣದಲ್ಲಿ ಸಂಜೆ 4.30 ನಡೆಯಲಿದೆ.
ಅಭಿನಂದನಾ ಭಾಷಣವನ್ನು ಡಾ. ಪಾದೇಕಲ್ಲು ವಿಷ್ಣು ಭಟ್ ಮಾಡಲಿದ್ದಾರೆ.
Advertisement. Scroll to continue reading.

ಕಾರ್ಯಕ್ರಮಗಳ ವಿವರ :
3.30ರಿಂದ ಶ್ರೀ ರಾಜೇಶ್ ಬಾಗಲೋಡಿ ಮತ್ತು ಶಿಷ್ಯರಿಂದ ಕೊಳಲು ವಾದನ.
4.30 ಕ್ಕೆ ಪ್ರಶಸ್ತಿ ಪ್ರದಾನ
6.00ರಿಂದ ರಾಗರತ್ನ ಮಾಲಿಕೆ -16
ಶ್ರೀ ರಾಘವೇಂದ್ರ ಆಚಾರ್ಯ ಮಣಿಪಾಲ, ಶ್ರೀಮತಿ ಶ್ರುತಿ ಗುರುಪ್ರಸಾದ್, ಶ್ರೀಮತಿ ಗಾರ್ಗಿ ಶಬರಾಯ, ಕು.ಶ್ರಾವ್ಯ ಬಾಸ್ರಿ ಅವರಿಂದ ಭಾವಗಾನ ಸಿಂಚನ.
8.00: ಮಿತ್ರ ಭೋಜನ.
Advertisement. Scroll to continue reading.

ಆತಿಥ್ಯ ಮತ್ತು ಪ್ರಾಯೋಜಕರು: ಅನಂತಪುರ ಮನೆಯವರು.
ಕಾರ್ಯಕ್ರಮದ ವಿವರಗಳಿಗಾಗಿ ಸಂಪರ್ಕ: 9964140601, ಉಮಾಶಂಕರಿ, ಕಾರ್ಯದರ್ಶಿ.
Advertisement. Scroll to continue reading.

In this article:award, Diksoochi news, Muraleedhar Upadhya Hiriadka, Shri A Eshwarayya smaraka kala Praveena award, Udupi, Writer

Click to comment