ಕೊಡಗು : ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ ಆಗಿದೆ. ಅಕ್ಟೋಬರ್ 17ರಂದು ಮಧ್ಯರಾತ್ರಿ 1.27ಕ್ಕೆ ತಿರ್ಥೋದ್ಭವ ಆಗಲಿದೆ.
ಈ ಬಗ್ಗೆ ಭಾಗಮಂಡಲದ ತಲಕಾವೇರಿ ದೇವಾಲಯ ಸಮಿತಿಯಿಂದ ಮಾಹಿತಿ ನೀಡಲಾಗಿದೆ. ತಲಕಾವೇರಿಯ ಕಾವೇರಿ ಉಗಮ ಸ್ಥಾನದಲ್ಲಿ ಅಕ್ಟೋಬರ್ 17ರಂದು ಮಧ್ಯರಾತ್ರಿ 1.27ಕ್ಕೆ ಕರ್ಕಾಟಕ ಲಗ್ನದಲ್ಲಿ ತೀರ್ಥೋದ್ಭವ ಉಂಟಾಗಲಿದೆ ಎಂದು ಹೇಳಿದೆ.
ಕೊಡವರ ಕುಲದೇವತೆ ಕಾವೇರಿಯು, ಪ್ರತಿವರ್ಷವೂ ತುಲಾ ಸಂಕ್ರಮಣದಂದು (ಅಕ್ಟೋಬರ್ ತಿಂಗಳಿನಲ್ಲಿ) ಇಲ್ಲಿ ನೀರು ಬುಗ್ಗೆಗಳಾಗಿ ಕಾಣಿಸಿಕೊಳ್ಳುತ್ತಾಳೆ. ಇದನ್ನು ‘ತೀರ್ಥೋದ್ಭವ’ ಎಂದು ಹೇಳಲಾಗುತ್ತದೆ. ಈ ಕ್ಷಣಕ್ಕೆ ಸಾಕಷ್ಟು ಜನ ಸಾಕ್ಷಿಯಾಗುತ್ತಾರೆ.
Advertisement. Scroll to continue reading.

ಎಲ್ಲರೂ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳುವ ಕಾವೇರಿಯ ದರ್ಶನ ಪಡೆಯುತ್ತಾರೆ. ಇದು ಸಂಭ್ರಮದ ಕ್ಷಣ ಕೂಡಾ ಹೌದು. ಈ ಪವಿತ್ರ ದಿನದಂದು ಕೊಡಗಿನಲ್ಲಿ ಸಡಗರ ಮನೆ ಮಾಡಿರುತ್ತದೆ.
In this article:diksoochi Tv, diksoochi udupi, Diksoochinews, Featured, kodagu, thalakaveri

Click to comment