Connect with us

Hi, what are you looking for?

Diksoochi News

Uncategorized

ಬೈಂದೂರು : ಲಾಕ್ ಡೌನ್ ಎಫೆಕ್ಟ್; ಪ್ರವಾಸಿಗರಿಲ್ಲದೆ ರಸ್ತೆಯಲಿ ಸಾಗಿ ಬರುತ್ತಿರುವ ಒಂಟೆಗಳು; ಆಹಾರ ನೀಡಿ ಮಾನವೀಯತೆ ಮೆರೆದ ಆಕಳಬೈಲು ದೇವಾಡಿಗ ಸಮಾಜ ತಂಡ

0

ವರದಿ : ವೀರಭದ್ರ ಗಾಣಿಗ

ಉಡುಪಿ : ಕರಾವಳಿಯಲ್ಲಿ ಒಂಟೆಗಳಿಗೂ ಕೊರೋನಾ ಲಾಕ್ ಡೌನ್ ಪರಿಣಾಮ ಬೀರಿದೆ. ದೇವಾಲಯಗಳಿಗೆ ಭಕ್ತರಿಗೆ ಅವಕಾಶವಿಲ್ಲ. ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಬರುವಂತಿಲ್ಲ. ಹಾಗಾಗಿ ಪ್ರವಾಸಿಗರನ್ನೇ ನೆಚ್ಚಿಕೊಂಡಿರುವ ಒಂಟೆ ಸವಾರಿಗೂ ಹೊಡೆತ ಬಿದ್ದಿದೆ. ಹಾಗಾಗಿ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಿಂದ ಒಂಟೆಗಳು ನಡೆದು ಬರುತ್ತಿರುವ ದೃಶ್ಯ ಕಂಡು ಬಂದಿದೆ.


ಮುರುಡೇಶ್ವರ ಬೀಚ್ ನಲ್ಲಿ ಪ್ರವಾಸಿಗರನ್ನೆ ನಂಬಿ ಬದುಕು ಕಂಡಿದ್ದ ಒಂಟೆ ಮಾಲೀಕರು ಕಂಗಾಲಾಗಿದ್ದಾರೆ. ಮುರುಡೇಶ್ವರ ದಿಂದ ರಾಷ್ಟ್ರೀಯ ಹೆದ್ದಾರಿ 66 ರ ಮೂಲಕ ನಡೆದು ಸಾಗುತ್ತಿರುವ ಒಂಟೆಗಳು ಉಡುಪಿ ಬೀಚ್ ಗೆ ತೆರಳುವ ಉದ್ದೇಶಕ್ಕೆ ನಡೆದು ಸಾಗುತ್ತಿವೆ.
ಬೈಂದೂರು ಅರೆಹೊಳೆ ಬಳಿ ಒಂಟೆಗಳ ಕಷ್ಟಕ್ಕೆ ಮರುಗಿದ ಆಕಳಬೈಲು ದೇವಾಡಿಗರ ಸಮಾಜ ತಂಡ ಒಂಟೆಗಳಿಗೆ ಕಲ್ಲಂಗಡಿ ಮತ್ತಿತರ ಆಹಾರ ನೀಡಿ ಮಾನವೀಯತೆ ಮೇರೆದಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಅಂತಾರಾಷ್ಟ್ರೀಯ

0 ಜೆರುಸಲೇಂ: ನಿರೀಕ್ಷೆಯಂತೆಯೇ ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸಿದೆ. ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಕ್ರೂಸ್​ ಕ್ಷಿಪಣಿಗಳು ಸೇರಿದಂತೆ 200ಕ್ಕೂ ಹೆಚ್ಚು ಬಗೆಯ ಡ್ರೋನ್​ ಹಾಗೂ ಕ್ಷಿಪಣಿಗಳ ದಾಳಿಗಳನ್ನು ನಡೆಸಿದೆ. ಸಿರಿಯಾದ ರಾಜಧಾನಿ...

ರಾಷ್ಟ್ರೀಯ

0 ನವದೆಹಲಿ: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು ಕೇವಲ ಐದು ದಿನಗಳು ಬಾಕಿ ಉಳಿದಿರುವಾಗ, ಭಾರತೀಯ ಜನತಾ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯನ್ನು ಭಾನುವಾರ ಬಿಡುಗಡೆ ಮಾಡಿದ್ದು “ಮೋದಿ ಕಿ ಗ್ಯಾರಂಟಿ”...

ರಾಜ್ಯ

0 ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆಗೈದ ಘಟನೆ ನಗರದ ಹೆಚ್‍ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಗಿರಿಜಾ ಎಂದು ಗುರುತಿಸಲಾಗಿದೆ. ಆಕೆಯ ಪತಿ ನವೀನ್ ಹತ್ಯೆಗೈದ ಆರೋಪಿಯಾಗಿದ್ದಾನೆ....

ಅಂತಾರಾಷ್ಟ್ರೀಯ

0 ಬೊಗೋಟಾ: ಈ ಬಾರಿ ಬೇಸಿಗೆಗೆ ಸಿಲಿಕಾನ್‌ ಸಿಟಿ ಬೆಂಗಳೂರು ಮಾತ್ರವಲ್ಲ ವಿಶ್ವದ ವಿವಿಧೆಡೆ ಮಹಾನಗರಗಳೂ ತೀವ್ರ ನೀರಿನ ಕೊರತೆ ಎದುರಿಸುತ್ತಿವೆ. ಅದರಲ್ಲೂ ದಕ್ಷಿಣ ಅಮೆರಿಕದ ಬೊಗೋಟಾ ನಗರವಂತೂ ಗಂಭೀರ ಸ್ಥಿತಿಯಲ್ಲಿದೆ. ಜನರಿಗೆ ಆಶಾಕಿರಣದಂತಿದ್ದ...

ಕರಾವಳಿ

0 ಮಂಗಳೂರು: ಲೋಕಸಭೆ ಚುನಾವಣೆ 2024 ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಂಜೆ ಮಂಗಳೂರಿನಲ್ಲಿ ಬೃಹತ್‌ ರೋಡ್‌ ಶೋ ಕೈಗೊಂಡರು.ರೋಡ್ ಶೋ ಗೂ ಮೊದಲು ನಾರಾಯಣ ಗುರು ವೃತ್ತದಲ್ಲಿ ನಾರಾಯಣ...

error: Content is protected !!