ವರದಿ : ದಿನೇಶ್ ರಾಯಪ್ಪನಮಠ
ಬೈಂದೂರು : ಕಿರಿಮಂಜೇಶ್ವರ ಗ್ರಾ.ಪಂ.ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 3 ದಿನಗಳ ಕಾಲ ಸ್ವಯಂ ಲಾಕ್ ಡೌನ್ ಘೋಷಿಸಲಾಗಿದೆ. ಸಣ್ಣ ಪುಟ್ಟ ಕಾರಣಗಳಿಗಾಗಿ ಜನರು ಅಂಗಡಿಗಳಲ್ಲಿಗೆ ತಿರುಗಾಡುತ್ತಿರುವುದದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಜೂನ್ 1 ರಿಂದ 3 ರ ವರೆಗೆ ಮೂರು ದಿನಗಳ ಕಾಲ ಲಾಕ್ ಡೌನ್ ಇರಲಿದ್ದು, ದಿನನಿತ್ಯದ ಅಗತ್ಯ ವಸ್ತುಗಳನ್ನು ಮೇ 31 ರಂದೇ ಖರೀದಿಸಿ ಇಟ್ಟುಕೊಳ್ಳುವಂತೆ ಗ್ರಾಮ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ.
ಮೂರು ದಿನ ಅಂಗಡಿ ಮುಂಗಟ್ಟುಗಳನ್ನು ತೆರೆಯುವಂತಿಲ್ಲ. ಪರವಾನಿಗೆ ಹೊಂದಿರುವ ಹಾಲಿನ ಅಂಗಡಿ ಮತ್ತು ಔಷಧಿ ಅಂಗಡಿಗಳು ಸರ್ಕಾರ ನಿಗದಿ ಪಡಿಸಿರುವ ಸಮಯದಲ್ಲಿ ಮಾತ್ರ ತೆರೆದಿರುತ್ತದೆ. ಆರೋಗ್ಯ ಸೇವೆ ಹೊರತು ಪಡಿಸಿ ಯಾವುದೇ ಕಾರಣಕ್ಕೂ ಹೊರ ಬರುವಂತಿಲ್ಲ ಂದು ತಿಳಿಸಲಾಗಿದೆ.
ತುರ್ತು ಸೇವೆ ಬೇಕಾಗಿದ್ದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ನ ಸಹಾಯವಾಣಿ ಸಂಖ್ಯೆ 9483343890 ಮತ್ತು 9739089144 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
Advertisement. Scroll to continue reading.

In this article:byndoor, Diksoochi news, diksoochi Tv, diksoochi udupi, kirimanjeshwara

Click to comment