Connect with us

Hi, what are you looking for?

Diksoochi News

ಕರಾವಳಿ

ಹೆಬ್ರಿ : ವರಂಗ ಗ್ರಾ.ಪಂ. ವ್ಯಾಪಿಯ ಕೆ. ಇ. ಎಲ್ ಕಂಪೆನಿ ಬಂದ್ ಮಾಡುವಂತೆ ತಹಶೀಲ್ದಾರ್ ರಿಗೆ ಮನವಿ ಸಲ್ಲಿಕೆ

0

ಹೆಬ್ರಿ : ವರಂಗ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಕೆಲ್ ಟೆಕ್ ಏನರ್ಜೀಸ್ ಲಿಮಿಟೆಡ್ (ಕೆ. ಇ. ಎಲ್) ಕಂಪೆನಿಯಲ್ಲಿ ಸರಿ ಸುಮಾರು 250 ರಿಂದ 300 ಕಾರ್ಮಿಕರು ದಿನ ನಿತ್ಯ ಕಾರ್ಯ ನಿರ್ವಹಿಸುತ್ತಾ ಇರುತ್ತಾರೆ. ಇಲ್ಲಿ ಕೋವಿಡ್ ಗೆ ಸಂಬಂಧಪಟ್ಟ ಯಾವುದೇ ಕಾನೂನಿನ ಪಾಲನೆ ಆಗುತ್ತಿಲ್ಲ. ಈ ಕಂಪೆನಿಗೆ ಹೊರ ರಾಜ್ಯದಿಂದ ಪ್ರತಿದಿನ ಅಂದಾಜು 10 ರಿಂದ 15 ಟ್ರಕ್ ಗಳು ಲೋಡಿಂಡ್ ಗೆ ಬರುತ್ತದೆ. ಈ ಕಂಪೆನಿಯಲ್ಲಿ ಸ್ಫೋಟಕ ಸಾಮಗ್ರಿಗಳಿಗೆ ಸಂಭಂದಪಟ್ಟ ವಸ್ತುಗಳು ತಯಾರಾಗುತ್ತದೆ.
ಇದೇ ಕಾರಣದಿಂದ ವರಂಗ ಗ್ರಾಮದಲ್ಲಿ ಕೊವಿಡ್ ಸೋಂಕು ಹೆಚ್ಚಾಗುತ್ತಿದೆ. ಆದ ಕಾರಣ ಕರ್ನಾಟಕ ಸರ್ಕಾರದ ಮಾರ್ಗಸೂಚನೆಯಂತೆ ಜೂನ್ 2 ರಿಂದ 7 ರ ವರೆಗೆ ಹೊರಡಿಸಿದ ಆದೇಶದ ಅನ್ವಯಕ್ಕೆ ಈ ಕೆ. ಇ.ಎಲ್. ಕಂಪೆನಿಯನ್ನು ಒಳಪಡಿಸಬೇಕಾಗಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣ ಗೌಡ ಬಣ) ಹೆಬ್ರಿ ತಾಲೂಕ್ ವರಂಗ ಘಟಕದಿಂದ ತಹಶೀಲ್ದಾರ್ ಪುರಂದರ ಕೆ. ಅವರಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಹೆಬ್ರಿ ತಾಲ್ಲೂಕ್ ವರಂಗ ಘಟಕದ ಅಧ್ಯಕ್ಷ ವಿ. ಆರ್. ಸತೀಶ್ ಆಚಾರ್ಯ, ಗೌರವ ಅಧ್ಯಕ್ಷ ಉದಯ ಸೇರಿಗಾರ, ಮಹಿಳಾ ಅಧ್ಯಕ್ಷೆ ಸುಲತ ಆಚಾರ್ಯ ಮತ್ತು ಸದಸ್ಯರಾದ ಶ್ರೀನಿವಾಸ ನಾಯಕ್ ಉಪಸ್ಥಿತಿಯಲ್ಲಿ ಮನವಿ ಪತ್ರ ನೀಡಲಾಯಿತು

Click to comment

Leave a Reply

Your email address will not be published. Required fields are marked *

You May Also Like

ರಾಷ್ಟ್ರೀಯ

1 ಬೆಂಗಳೂರು: ದೆಹಲಿ ಮದ್ಯ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ಅರವಿಂದ್‌ ಕೇಜ್ರಿವಾಲ್‌ ಅವರು ಖಲಿಸ್ತಾನಿ ಗುಂಪುಗಳಿಂದ 16 ಮಿಲಿಯನ್‌ ಡಾಲರ್‌ (ಅಂದಾಜು 133.54 ಕೋಟಿ ರು.) ಪಡೆದಿರುವ ಗಂಭೀರ ಆರೋಪ ಕೇಳಿ ಬಂದಿದೆ. ಭಾರತಕ್ಕೆ...

ರಾಷ್ಟ್ರೀಯ

0 ಮುಂಬೈ: ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದ ವಿದ್ಯಾರ್ಥಿಯನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ  ಥಾಣೆಯಲ್ಲಿ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿ ಸಲ್ಮಾನ್‌ ಮೌಲ್ವಿ ಎಂದು ತಿಳಿದುಬಂದಿದೆ. ಈತ ಹೊಸ ಮನೆ ಕಟ್ಟಲು...

ಅಂತಾರಾಷ್ಟ್ರೀಯ

0 ವಾಷಿಂಗ್ಟನ್‌: ಕಾರ್ಗೋ ಹಡಗೊಂದು ಡಿಕ್ಕಿ ಹೊಡೆದ ಪರಿಣಾಮ ಅಮೆರಿಕಸ ಪ್ರಸಿದ್ಧ ಸೇತುವೆ ಮುರಿದು ಬಿದ್ದ ಘಟನೆ ನಡೆದಿದೆ. ಸೇತುವೆಗೆ ಕಾರ್ಗೋ ಹಡಗು ಬಂದು ಗುದ್ದುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ...

ರಾಷ್ಟ್ರೀಯ

0 ನವದೆಹಲಿ: ಶೀಘ್ರದಲ್ಲೇ ಟೋಲ್ ಪಾವತಿ ಸೇವೆಗಳಿಗೆ ತೆರೆ ಬೀಳಲಿದ್ದು, ಸ್ಯಾಟೆಲೈಟ್ ಆಧಾರಿತ ಟೋಲ್ ಸೇವೆ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಹಾಲಿ ಇರುವ ಫಾಸ್ಟ್ ಟ್ಯಾಗ್ ಪಾವತಿ...

ರಾಷ್ಟ್ರೀಯ

0 ಇಟಾನಗರ: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಸೇರಿದಂತೆ ಐವರು ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ವಿಧಾನಸಭಾ ಚುನಾವಣೆಯ  ನಾಮಪತ್ರ ಸಲ್ಲಿಕೆಯ ಡೆಡ್‌ಲೈನ್‌ ಬುಧವಾರ ಮುಕ್ತಾಯವಾಗಿದ್ದು 5 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು...

error: Content is protected !!