ವರದಿ : ಮಹೇಶ್
ಬೈಂದೂರು: ಜಿಲ್ಲೆಯಲ್ಲಿ ಕರೋನಾದಿಂದ ಸಿಲ್ ಡೌನ್ ಆದ ಕೆಲವು ಗ್ರಾಮಗಳಿಗೆ ಇಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಭೇಟಿ ನೀಡಿದರು. ಈ ಸಮಯದಲ್ಲಿ ಜಿಲ್ಲೆಯ ಗಡಿಭಾಗವಾದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಚೆಕ್ ಪೋಸ್ಟ್ ನಲ್ಲಿ ಭದ್ರತೆಯನ್ನು ವೀಕ್ಷಿಸಿದರು.
ಈ ಸಮಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 38 ರಿಂದ 40 ಪಾಸಿಟಿವ್ ರೇಟ್ ಇದ್ದು ಮೊದಲು ನೂರು ಜನರಿಗೆ ಟೆಸ್ಟ್ ಮಾಡಿದಾಗ 40 ಜನರಿಗೆ ಪಾಸಿಟಿವ್ ಕಂಡುಬರುತ್ತಿತ್ತು,ಲ. ಆದರೆ ಇದೀಗ ನೂರು ಜನರನ್ನು ಟೆಸ್ಟ್ ಮಾಡಿದರೆ ಕೇವಲ 16 ಜನರಿಗೆ ಪಾಸಿಟಿವ್ ರೇಟ್ ಕಂಡುಬರುತ್ತಿದೆ. ಆದರೆ ಇಷ್ಟಕ್ಕೆ ನಾವು ಸುಮ್ಮನೆ ಕುಳಿತುಕೊಂಡರೆ ಆಗೋದಿಲ್ಲ ನಮ್ಮ ಗುರಿ 5℅ ಪರ್ಸೆಂಟ್ ಗಿಂತ ಕೆಳಗಿರಬೇಕು. ಇದು ಮುಟ್ಟುವ ತನಕ ನಮ್ಮ ಕೆಲಸ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತದೆ ಎಂದರು.

ಈಗಾಗಲೇ ನಾವು 40 ಗ್ರಾಮಪಂಚಾಯಿತಿ ವ್ಯಾಪ್ತಿಯನ್ನು ಸಿಲ್ಡ್ ಡೌನ್ ಮಾಡಿದ್ದು ಸೆಕ್ಷನ್ 144 ಜಾರಿಗೊಳಿಸಿದ್ದೇವೆ. ಗ್ರಾಮ ಪಂಚಾಯಿತಿಯ ಅಧ್ಯಕ್ಷರು ,ಸದಸ್ಯರು ಹಾಗೂ ಪಿಡಿಒಗಳ ಕಾರ್ಯಕ್ಷಮತೆ ಗಳನ್ನು ಈ ಸಂದರ್ಭ ನಾವು ಮೆಲುಕು ಹಾಕಲೇಬೇಕು. ಪೊಲೀಸ್ ಇಲಾಖೆಯ ಅಧಿಕಾರಿಗಳ ಕಾರ್ಯ ಮೆಚ್ಚಲೇಬೇಕು. ಈಗಾಗಲೇ ನಲವತ್ತು ಗ್ರಾಮಪಂಚಾಯಿತಿಯಲ್ಲಿ ಯಾವುದೇ ಆಕ್ಟಿವಿಟಿ ಇಲ್ಲದೆ ನಿಯಂತ್ರಣಕ್ಕೆ ಬಂದಿದೆ. ಅದರ ಹಾಗೆ ಇದೀಗ ನಮಗೆ ರಿಸಲ್ಟ್ ಕಾಣಿಸ್ತಾ ಇದೆ. ಉದಾಹರಣೆಗೆ ಶಿರೂರಿನಲ್ಲಿ 350ಕ್ಕೂ ಹೆಚ್ಚು ಆಕ್ಟಿವ್ ಕೇಸ್ ಗಳಿದ್ದು 65 ಕೇಸುಗಳಿಗೆ ಇಳಿಕೆಯಾಗಿದೆ. ಇದೀಗ ಸಾಕಷ್ಟು ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಹೊಸ ಪ್ರಕರಣಗಳು ಕಡಿಮೆಯಾಗಿದೆ. ಶಿರೂರು ವ್ಯಾಪ್ತಿಯಲ್ಲಿ ದಿನ 25 ರಿಂದ 30 ಪ್ರಕರಣಗಳು ದಾಖಲಾಗುತ್ತಿದ್ದು, ಆದರೆ ನಿನ್ನೆ ಕೇವಲ ಒಂದು ಪ್ರಕರಣ ದಾಖಲಾಗಿದೆ. ಇದರಿಂದ ಈ ಸೀಲ್ಡ್ ಡೌನ್ ತುಂಬಾ ಪರಿಣಾಮಕಾರಿಯಾಗಿದೆ ಎನ್ನುವುದು ಗೋಚರಿಸುತ್ತದೆ ಎಂದರು.
ಶಿರೂರು ವ್ಯಾಪ್ತಿಯಲ್ಲಿ ಹೆಚ್ಚು ಕೇಸು ಇರುವ ಕಾರಣ ಮುಂಜಾನೆಯಿಂದ ಬೈಂದೂರು ತಾಲೂಕಿನ ವ್ಯಾಪ್ತಿಯಲ್ಲಿ ನಾನು ಭೇಟಿ ನೀಡಿದ್ದೇನೆ. ಹದಿನಾಲ್ಕಕ್ಕೆ ಲಾಕ್ಡೌನ್ ಮುಗಿಯುತ್ತದೆ. ಅಷ್ಟರ ಒಳಗೆ ಜಿಲ್ಲೆಯಾದ್ಯಂತ 5 ಪರ್ಸೆಂಟ್ ಪಾಸಿಟಿವ್ ರೇಟ್ ಬರಬೇಕು ಅನ್ನುವುದು ನಮ್ಮ ಉದ್ದೇಶವಾಗಿದೆ. ಆದ್ದರಿಂದ ಜನಜೀವನ ನಾರ್ಮಲ್ ಗೆ ಬರಬೇಕು. ದುಡಿಯುವ ಜನರು ದುಡಿಬೇಕು. ಆರ್ಥಿಕ ಸ್ಥಿತಿ ಜನರದ್ದು ಸರಿಯಾಗಬೇಕು ಅನ್ನೋದು ನಮ್ಮ ಆಶಯವಾಗಿದೆ. ಪಂಚಾಯತ್ ಟಾಸ್ಕ್ ಪೋರ್ಸ್ ಬಹಳ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದೆ. ಅವರು ತಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಬಹಳ ಉತ್ತಮವಾಗಿ ನಿರ್ವಹಿಸುತ್ತಿರುವುದರಿಂದ ಅಂತಹ ಯಾವುದೇ ಸಮಸ್ಯೆಗಳು, ದಿನಸಿ ಇರಬಹುದು ದೈನಂದಿನ ಉಪಯುಕ್ತ ಆಹಾರ ಪದಾರ್ಥಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಪಂಚಾಯತ್ ವ್ಯಾಪ್ತಿಯ ಅಂಗಡಿ-ಮುಂಗಟ್ಟು ನವರು ಇದನ್ನ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಅದ್ಭುತವಾದ ಕಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿಕೆ ನೀಡಿದರು.
ಈ ಸಮಯದಲ್ಲಿ ಕುಂದಾಪುರ ಉಪವಿಭಾಗದಿಕಾರಿ ಕೆ.ರಾಜು, ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮಿ, ಮತ್ತು ಬೈಂದೂರು ವ್ರತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ ಮತ್ತಿತರರು ಉಪಸ್ಥಿತರಿದ್ದರು.

