Connect with us

Hi, what are you looking for?

ಕರಾವಳಿ

ಕುಂದಾಪುರ : ಯಕ್ಷಗಾನ ಮೇಳ ನಡೆಸುವ ದೇವಸ್ಥಾನಗಳಿಂದಲೇ ಕಲಾವಿದರಿಗೆ ಪೂರ್ಣ ಸಂಬಳ ನೀಡಬೇಕು : ಸಚಿವ ಕೋಟ

ವರದಿ : ದಿನೇಶ್ ರಾಯಪ್ಪನಮಠ

ಕುಂದಾಪುರ : ಯಾವ ದೇವಸ್ಥಾನದ ಮೂಲಕ ಯಕ್ಷಗಾನ ಮೇಳ ನಡೆಯುತ್ತದೆಯೋ ಆ ದೇವಸ್ಥಾನದ ಸಂಪನ್ಮೂಲ ಕ್ರೋಢೀಕರಿಸಿ ಕಲಾವಿದರಿಗೆ ಪೂರ್ಣಾವಧಿಯ ಸಂಭಾವನೆ ಕೊಡುವಂತೆ ಹೇಳಿದ್ದೇನೆ. ಕೆಲವು ದೇವಸ್ಥಾನಗಳು ಕಲಾವಿದರ ಬಳಿ ಅಗ್ರಿಮೆಂಟ್ ಮಾಡಿಕೊಳ್ಳುವಾಗಲೇ ಮಧ್ಯದಲ್ಲೇ ಆಟ ನಿಂತರೆ, ಸಂಭಾವನೆ ಕಡಿತಗೊಳಿಸಲು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ ಎಂಬ ಸುದ್ದಿ ಇದೆ. ಆದೇನೆ ಇದ್ದರೂ, ಯಾವ ದೇವಸ್ಥಾನದ ಮೂಲಕ ಯಕ್ಷಗಾನ ಮೇಳ ನಡೆಯುತ್ತದೆಯೋ ಆ ದೇವಸ್ಥಾನದ ಸಂಪನ್ಮೂಲಗಳಲ್ಲಿ ಶಕ್ತಿ ಇದ್ದರೆ ಕಲಾವಿದರಿಗೆ ಪೂರ್ಣ ಸಂಬಳ ಕೊಡಿ ಎಂದು ಸರ್ಕಾರ ಆದೇಶಿಸಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಅವರು ಕುಂದಾಪುರ ತಲ್ಲೂರು ಗ್ರಾಮ ಪಂಚಾಯತ್ ನಲ್ಲಿ ವಿಶೇಷ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತಾಡಿದರು.

ಮೋದಿಯವರಿಗೆ ಅಭಿನಂದನೆ

ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಗಳಿಗೆ ಅದರದೇ ಆದ ಜವಾಬ್ದಾರಿ ಇದೆ. ಉದಾಹರಣೆಗೆ ಸರ್ಕಾರಕ್ಕೆ ಸಲಹೆ ಕೊಟ್ಟರೆ ಅದನ್ನು ತೆಗೆದುಕೊಳ್ಳಬಾರದೆಂದಿಲ್ಲ. ಪ್ರಧಾನಮಂತ್ರಿ ಮೋದಿಯವರು, ಸುದೀರ್ಘ ಅವಧಿಯವರೆಗೆ ರೇಶನ್ ಉಚಿತವಾಗಿ ಕೊಡುವ ಬಗ್ಗೆ ಹೇಳಿರುವುದು, 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಯಾವ ರೀತಿ ಪೂರೈಕೆ ಮಾಡುತ್ತೇವೆ ಎಂದಿರುವುದು, 75% ಲಸಿಕೆ ಉಚಿತವಾಗಿ ಕೊಡುವ ವ್ಯವಸ್ಥೆ ಮಡಿರುವುದು, 25% ಹಣವಂತರು ಲಸಿಕೆ ಪಡೆದರೂ ಕೂಡ ಮಾರ್ಗಸೂಚಿ, ನಿಯಮಗಳ ಆಧಾರದಲ್ಲೇ ಹೆಚ್ಚಿನ ಸೇವಾ ಶುಲ್ಕ ಪಡೆಯದೇ ನೀಡುವುದು ಇವೆಲ್ಲವೂ ಸಾಮಾನ್ಯ ಸಂಗತಿಯಾಗದೆ ಇಡೀ ರಾಷ್ಟ್ರವನ್ನು ಸೆಳೆದಿರುವ ಸಂಗಾತಿಯಾಗಿದ್ದು, ಮೋದಿಯವರಿಗೆ ಅಭಿನಂದನೆ ಎಂದರು.

ಸೌಕೂರು ಏತ ನೀರಾವರಿ ಯೋಜನೆಯಲ್ಲಿ ತಲ್ಲೂರು ಗ್ರಾ.ಪಂ.ಸೇರಿಸುವಂತೆ ಶಾಸಕರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

Advertisement. Scroll to continue reading.

ಪಾರದರ್ಶಕವಾಗಿ ಲಸಿಕೆ ವಿತರಣೆ

ಪಿ ಹೆಚ್ ಸಿ, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾಸ್ಪತ್ರೆಯ ಮೂಲಕ ವ್ಯಾಕ್ಸಿನ್ ಹಂಚಿಕೆ ಮಾಡಲಾಗಿದೆ. ಗ್ರಾ.ಪಂ.ಅಧ್ಯಕ್ಷರು ಸದಸ್ಯರುಗಳು ಕೊರೋನಾ ವಾರಿಯರ್ ವ್ಯಾಪ್ತಿಗೆ ಬರುವಂತೆ ಮನವಿ ಮಾಡಿದ್ದೇನೆ. ಪತ್ರಕರ್ತರೂ ಸೇರಿದಂತೆ ಅನೇಕ ಕೊರೋನಾ ವಾರಿಯರ್ಸ್ ವ್ಯಾಪ್ತಿಯೊಳಗೆ ಬರುವವರಿಗೆ ಪ್ರಾಶಸ್ತ್ಯ ನೀಡಿ ಲಸಿಕೆ ಕೊಡಬೇಕು. ಉಳಿದಿರುವಂತದ್ದ ಲಸಿಕೆಯನ್ನು 60 ವರ್ಷ ಮೇಲ್ಪಟ್ಟವರಿಗೆ ಪ್ರಥಮ ಡೋಸ್ ಕೊಟ್ಟಿದ್ದೇವೆ, ದ್ವಿತೀಯ ಡೋಸ್ ಕೊಡಬೇಕು. ಅಂಗವಿಕಲರಿಗೆ, 49 ವರ್ಷ 60 ವರ್ಷ ಒಳಗಿನವರಿಗೆ ಕೊಡುವಂತದ್ದಿದೆ. 18 ವರ್ಷ ಮೇಲ್ಪಟ್ಟವರಿಗೆ ಕೊಡಲು ಇದೆ. ಈ ಪ್ರಕಾರವೇ ಲಸಿಕೆ ವಿತರಣೆ ನಡೆಯುತ್ತದೆ. ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿರುವಾಗ ಕೆಲವರಿಗೆ ಬಿಜೆಪಿಯವರಿಗೆ ಮಾತ್ರ ಕೊಡುತ್ತಿದ್ದಾರೆ ಎಂದು ಯಾರಾದರೂ ಹೇಳಿರಬಹುದು ಇದರಲ್ಲಿ ಗೊಂದಲಗಳಿಲ್ಲ.

ಲಸಿಕೆ ಹಂಚಿಕೆ ಪಾರದರ್ಶಕವಾಗಿರಬೇಕು ಎಂದು ಆರೋಗ್ಯ ಇಲಾಖೆಗೆ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಯಾವ ಪಾರ್ಟಿಯವರಾದರೂ, ಬಡವರಾದರೂ ಎಲ್ಲರೂ ನಮ್ಮವರೇ. ತಪ್ಪುಗಳಾಗಬಾರದು. ಎಚ್ಚರದಿಂದ ನಿಭಾಯಿಸಲು ತಿಳಿಸಿದ್ದೇನೆ ಎಂದರು.

ಪಂಚಾಯತಿ ಸೀಲ್ಡ್ ಡೌನ್ ಮಾಡುವ ಬಗ್ಗೆ ಜಿಲ್ಲಾಡಳಿತ ತೀರ್ಮಾನ ಕೈಗೊಳ್ಳಲಿದೆ ಎಂದು ಇದೇ ವೇಳೆ ಅವರು ಹೇಳಿದರು.

ಈ ಸಂದರ್ಭದಲ್ಲಿ ಮಹೇಂದ್ರ ಪೂಜಾರಿ, ಕರಣ್ ಪೂಜಾರಿ,ಬಾಬು ಹೆಗ್ಡೆ, ಸದಾನಂದ ಉಪ್ಪಿನಕುದ್ರು ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28) ಬಂಧಿತ...

Uncategorized

ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು ಗ್ರಾಮ...

Uncategorized

ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ ಅನ್ನದಾನ...

Uncategorized

ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ ತುರ್ತು...

error: Content is protected !!