ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಕೋವಿಡ್ 2 ನೇ ಅಲೆಯಲ್ಲಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಮನೆ ಮಂದಿಯೆಲ್ಲಾ ಸೊಂಕಿಗೆ ತುತ್ತಾಗಿ ದೊಡ್ಡ ಪ್ರಮಾಣದಲ್ಲಿ ವೈದ್ಯಕೀಯ ವೆಚ್ಚ ಭರಿಸಿ ಪ್ರಾಣಗಳನ್ನು ಉಳಿಸಿ ಕೊಳ್ಳುತ್ತಿದ್ದಾರೆ. ಇನ್ನೂ ಸಾಕಷ್ಟು ಜನ ಹಣ ಖರ್ಚು ಮಾಡಿ ಪ್ರಾಣವನ್ನು ಕಳೆದು ಕೊಂಡಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದ್ದು, ಹೀಗೆ ಜನರು ಆರ್ಥಿಕ ಸಂಕಷ್ಟದಲ್ಲಿರುವಾಗ ಪೆಟ್ರೋಲ್, ಡೀಸೆಲ್ ಹಾಗೂ ವಿದ್ಯುತ್ ದರ ಏರಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನ ವಿರೋಧಿ ನೀತಿಯಾಗಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ವ್ಯಾಪಿ ಪ್ರತಿಭಟನೆಯ ಅಂಗವಾಗಿ ಕುಂದಾಪುರದ ಹಂಚು ಕಾರ್ಮಿಕ ಭವನ, ನಾಡ, ಹಡವು ಗ್ರಾಮದ ಮನೆ ಮನೆಗಳಲ್ಲಿ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಿ ಖಂಡಿಸಲಾಯಿತು.
ಕೋವಿಡ್ 2 ನೇ ಅಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ 8 ರಷ್ಟಿದ್ದ ನಿರುದ್ಯೋಗ ದ ಪ್ರಮಾಣ ಮೇ ಒಂದೇ ತಿಂಗಳಲ್ಲಿ ಶೇ 12 ಕ್ಕೆ ಏರಿಕೆಯಾಗಿದ್ದು, ಅಡುಗೆ ಗ್ಯಾಸ್ 812, ತೋಗರಿಬೇಳೆ 160, ಅಡುಗೆ ಎಣ್ಣೆ 180 ರೂ ಆಗಿದೆ. ಇದರ ಜೊತೆಯಲ್ಲಿ ಪೆಟ್ರೋಲ್ – ಡೀಸಲ್ ಧರ ಒಂದು ತಿಂಗಳ ಅವಧಿಯಲ್ಲಿ 18 ಭಾರಿ ಏರಿಕೆಯಾಗಿದ್ದು, ಇದ್ದರಿಂದ ಸರಕು ಸಾಗಣೆಗಳ ವೆಚ್ಚದಲ್ಲಿ ಏರಿಕೆಯಾಗುವ ಕಾರಣ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿ ಇದರ ಹೊರೆ ಜನ ಸಾಮಾನ್ಯ ರ ಮೇಲೆ ಬೀಳಲಿದೆ. ಇದು ಸಾಲದೆಂಬಂತೆ ಇದರ ಜೊತೆಯಲ್ಲಿಯೇ ಗಾಯದ ಮೇಲೆ ಬರೆ ಎಳೆದಂತೆ ವಿದ್ಯುತ್ ದರ ಏರಿಸುವ ಮೂಲಕ ರಾಜ್ಯ ಸರ್ಕಾರ ಜನರನ್ನು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ.
ಈಗಾಗಲೇ ಕೋವಿಡ್ 2 ನೇ ಅಲೆಯಿಂದ ಶೇ 97% ರಷ್ಟು ಕುಟುಂಬಗಳ ಆದಾಯ ಕುಸಿತ ಕಂಡಿದೆಯೆಂದು ಭಾರತೀಯ ಆರ್ಥಿಕ ನಿಗಾ ಕೇಂದ್ರ ಹೇಳಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ರಾಜ್ಯ ಸರ್ಕಾರಗಳು ಪೆಟ್ರೋಲ್ ಡೀಸೆಲ್ ಹಾಗೂ ವಿದ್ಯುತ್ ಧರ ಏರಿಕೆ ಮಾಡಿರುವುದು ಅಮಾನವೀಯ ನಡೆಯಾಗಿದೆಯೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಅಭಿಪ್ರಾಯ ಪಟ್ಟಿದೆ. ಹಾಗಾಗಿ ಏರಿಸಿರುವ ಪೆಟ್ರೋಲ್ ಡೀಸಲ್ ಹಾಗೂ ವಿದ್ಯುತ್ ದರವನ್ನು ಕೂಡಲೆ ವಾಪಾಸ್ಸು ಪಡೆಯಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಅಧ್ಯಕ್ಷರಾದ ಆರತಿ ಲಾಲು ಪ್ರಸನ್ನ, ಕಾರ್ಯದರ್ಶಿ ಶೀಲಾವತಿ, ಮುಖಂಡರಾದ ಬಲ್ಕೀಸ್, ನಾಗರತ್ನ ನಾಡ, ಅಶ್ವಿನಿ ಮೊದಲಾದವರು ಭಾಗವಹಿಸಿದ್ದರು.