ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕೇಂದ್ರ ಸರಕಾರ ಪೆಟ್ರೋಲ್ ದರವನ್ನು ಏರಿಸಿದುದರ ವಿರುದ್ಧ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಮತ್ತು ಕೋಟ ಬ್ಲಾಕ್ ಕಾಂಗ್ರೆಸ್ ಜಂಟಿಯಾಗಿ ಇಂದು ಪ್ರತಿಭಟನೆ ನಡೆಸಿತು. ಬ್ರಹ್ಮಾವರ ಬಸ್ ನಿಲ್ದಾಣದಿಂದ ಟೆಂಪೋ ಒಂದನ್ನು ಪೆಟ್ರೋಲ್ ರಹಿತವಾಗಿ ಕಾರ್ಯಕರ್ತರು ಎಳೆದುಕೊಂಡು ಹೋಗುವುದರ ಮೂಲಕ ಪ್ರತಿಭಟನೆ ಜಾಥಾವು ಬ್ರಹ್ಮಾವರ ಆಕಾಶವಾಣಿ ವ್ರತ್ತದಿಂದ ಮೆರವಣಿಗೆ ಪೆಟ್ರೋಲ್ ಬಂಕ್ ತನಕ ಸಾಗಿಬಂತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಬಿ.ಭುಜಂಗ್ ಶೆಟ್ಟಿ ಮಾತನಾಡಿ, ಮೋದಿ ಸರಕಾರ ಜನರನ್ನು ಸುಳ್ಳು ಹೇಳಿ ಮೋಡಿ ಮಾಡುತ್ತಾ ಬಂದಿದೆ. ಪ್ರಪಂಚದಲ್ಲಿ ಬೇರೆ ಎಲ್ಲೂ ಇರದ ಪೆಟ್ರೊಲ್ ದರ ಭಾರತದಲ್ಲಿ ಮಾತ್ರ ಇದೆ. ಅವರು ಅಧಿಕಾರಕ್ಕೆ ಬರುವಾಗ ಬಡವರ ಬಗ್ಗೆ ಜನೋಪಯೋಗಿ ಯೋಜನೆಯನ್ನು ಹಾಕಿಕೊಂಡು ಅಧಿಕಾರ ಪಡೆದು ಇದೀಗ ಜನರನ್ನು ವಂಚಿಸುತ್ತಿದ್ದಾರೆ ಎಂದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರುಗಳಾದ ದಿನಕರ ಹೆರೂರು, ಶಂಕರ ಕುಂದರ್, ಡಾ.ಸುನೀತಾ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ರೋಶನಿ ವಲಿವೇರಾ, ಗೋಪಿ ಕೆ.ನಾಯ್ಕ್, ನಟರಾಜ್ ಹೊಳ್ಳ, ಯುವರಾಜ್, ತಾಜುದ್ದೀನ್ ಇನ್ನಿತರರು ಹಾಜರಿದ್ದರು.
