ವರದಿ : ದಿನೇಶ್ ರಾಯಪ್ಪನ ಮಠ
ಕುಂದಾಪುರ : ಹಲವಾರು ಸಮಯಗಳಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಿರುವ ಕುಂದಾಪುರ ಬೊಬ್ಬರ್ಯನ ಕಟ್ಟೆಯ ಸಮೀಪ DYSP ಕಚೇರಿಗೆ ಹೋಗುವ ದಾರಿಯನ್ನು ಸಂಪರ್ಕಿಸಲು ಉಡುಪಿ ಕುಂದಾಪುರ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಎಡಬದಿಯಲ್ಲಿ ಹೈವೆಯನ್ನು ಒಪನ್ ಮಾಡಿ ಸರ್ವಿಸ್ ರಸ್ತೆ ಮೂಲಕ Dysp ಕಚೇರಿಗೆ ತಿರುವನ್ನು ನೀಡಲು ಹಾಗೂ ಕುಂದಾಪುರ ಶಾಸ್ರೀ ಸರ್ಕಲ್ ನ ಸರ್ವಿಸ್ ರೋಡ್ ನಿಂದ ಉಡುಪಿ ಮಾರ್ಗದ ಕಡೆಗೆ ಸಾಗುವ ದಾರಿಯಲ್ಲಿ ಬಲಬದಿಯಲ್ಲಿ ಹೆದ್ದಾರಿಗೆ ಸೇರಲು ಕೂಡಲೆ 2 ಕಡೆಗಳಲ್ಲಿ ಒಪನ್ ಮಾಡಿಸುವಂತೆ NHAI ಅಧಿಕಾರಿಗಳಿಗೆ ಸಂಸದೆ ಶೋಭಾ ಕರಂದ್ಲಾಜೆಯವರು ಆಗ್ರಹಿಸಿದ್ದು ಇಂದು NHAI ಅಧಿಕಾರಿಗಳು ಸ್ಥಳಕ್ಕೆ ಬೇಟಿಕೊಟ್ಟು ಪರಿಶೀಲನೆ ನಡೆಸಿ ಕೂಡಲೆ ಸಮಸ್ಯೆಯನ್ನು ಮುಕ್ತಗೊಳಿಸಿ ರಸ್ತೆಯನ್ನು ಒಪನ್ ಮಾಡುವುದಾಗಿ ತಿಳಿಸಿದ್ದಾರೆ.
ಹಾಗೂ ಬಸ್ರೂರು ಮೂರ್ಕೈ ಹತ್ತಿರದ ಅಂಡರ್ ಪಾಸ್ ಅನ್ನು ಕೂಡಲೆ 2 ಕಡೆ ಹಂಪ್ ಅನ್ನು ಅಳವಡಿಸಿ ಕೂಡಲೆ ಒಪನ್ ಮಾಡುವುದಾಗಿ ತಿಳಿಸಿದ್ದಾರೆ,
ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರು ಮತ್ತು ಸ್ಥಳೀಯರ ಮನವಿಗೇ ಕೂಡಲೆ ಸ್ಪಂದಿಸಿದ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಧನ್ಯವಾದಗಳು.
NHAI ಇಂಜಿನಿಯರ್,ಕುಂದಾಪುರ ಮಂಡಲ ಅಧ್ಯಕ್ಷರಾದ ಶಂಕರ್ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ ,ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸದಾನಂದ ಬಳ್ಕೂರು, ಯುವಮೋರ್ಚಾ ಕುಂದಾಪುರ ಅಧ್ಯಕ್ಷ ಅವಿನಾಶ್ ಉಳ್ತೂರು, ರೈತಮೋರ್ಚಾ ಕುಂದಾಪುರ ಅಧ್ಯಕ್ಷ ಸುನಿಲ್ ಶೆಟ್ಟಿ ಹೇರಿಕುದ್ರು, ಹಿಂದುಳಿದ ವರ್ಗ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸುಧೀರ್ ಕೆ ಎಸ್, ಕುಂದಾಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಜಯ್ ಎಸ್ ಪೂಜಾರಿ, ಪುರಸಭಾ ಸದಸ್ಯ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್, ಉಪಾಧ್ಯಕ್ಷ ಸಂದೀಪ್ ಖಾರ್ವಿ,ಸ್ಥಾಯಿ ಸಮಿತಿ ಅಧ್ಯಕ್ಷ ರಾದ ಶೇಖರ್ ಪೂಜಾರಿ, ಸದಸ್ಯರಾದ ರೋಹಿಣಿ ಉದಯ್ ಕುಮಾರ್ , ಗಿರೀಶ್ ದೇವಾಡಿಗ, ಸ್ಥಳಿಯರು, ಉಪಸ್ಥಿತರಿದ್ದರು.
