ಪಡುಬಿದ್ರಿ: ಮನುಷ್ಯನ ಬದುಕಿನಲ್ಲಿ ಹುಟ್ಟಿನಿಂದ ಸಾವು ಬರುವವರೆಗೂ ವ್ಯೆದ್ಯರ ಪಾತ್ರ ಮುಖ್ಯವಾಗಿದೆ. ಕೊರೂನಾ ಸಂದರ್ಭದಲ್ಲಿಯೂ ತನ್ನ ಜೀವದ ಹಂಗನ್ನು ತೊರೆದ ಜನರ ಅರೋಗ್ಯ ರಕ್ಷಣೆಯ ಜವಾಬ್ದಾರಿಯನ್ನು ಹೂತು ವ್ಯೆದ್ಯಕೀಯ ಸೇವೆ ನೀಡಿದ ವ್ಯೆದರ ಸೇವೆ ಶ್ಲಾಘನೀಯ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಂಯೋಜಕ ನವೀನ್ಚಂದ್ರ ಜೆ ಶೆಟ್ಟಿ ಹೇಳಿದರು.
ಅವರು ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ವೈದ್ಯರ ದಿನಾಚರಣೆಯ ಅಂಗವಾಗಿ ಕೊರೂನಾ ವಾರಿಯರ್ಸ್ ಅಗಿ ಸೇವೆ ಸಲ್ಲಿಸಿದ ಪಡುಬಿದ್ರಿ ಪ್ರಾಥಮಿಕ ಅರೋಗ್ಯ ಕೇಂದ್ರದ ವ್ಯೆದಾಧಿಕಾರಿ ಡಾ. ರಾಜಶ್ರೀ ಕಿಣಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ರೋಟರಿ ಅಧ್ಯಕ್ಷ ಕೇಶವ್ ಸಾಲ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿಕಟ ಪೂರ್ವ ಸಹಾಯ ಗರ್ವನರ್ ಗಣೇಶ್ ಅಚಾರ್ಯ ಉಚ್ಚಿಲ, ವಲಯ ಸಂಯೋಜಕ ರಮೀಜ್ ಹುಸೇನ್, ನಿಯೋಜಿತ ಅಧ್ಯಕ್ಷ ಮಹಮ್ಮದ್ ನಿಯಾಜ್, ನಿಯೋಜಿತ ಕಾರ್ಯದರ್ಶಿ ಬಿ.ಯಸ್.ಅಚಾರ್, ಹೆಜಮಾಡಿ ಪಡುಕರೆ ಬಿಲ್ಲವ ಸೇವಾ ಸಮಾಜ ಸಂಘದ ಅಧ್ಯಕ್ಷ ಸುಧೀರ್ ಕರ್ಕೇರ, ಗ್ರಾಮ ಪಂಚಾಯಿತಿ ಸದಸ್ಯರಾದ ಹೇಮಚಂದ್ರ, ಜ್ಯೋತಿ ಮೆನನ್, ಎಮ್.ಎಸ್. ಶಫಿ ಉಪಸ್ಥಿತರಿದ್ದರು. ಸುಧಾಕರ್ ಕೆ. ಕಾರ್ಯಕ್ರಮ ನಿರೂಪಿಸಿದರು.

