Connect with us

Hi, what are you looking for?

Diksoochi News

Uncategorized

ಪೂರ್ಣ ಪ್ರಮಾಣದ ಪ್ರೇಕ್ಷಕರ ಮಧ್ಯೆ ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿ

0

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಪಂದ್ಯ ಆಗಸ್ಟ್ 4ರಿಂದ ಆರಂಭವಾಗಳಿದ್ದು, ಈ ಸರಣಿಯನ್ನು ಪೂರ್ಣ ಪ್ರಮಾಣದ ಪ್ರೇಕ್ಷಕರ ಸಮ್ಮುಖದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಕೊರೊನಾ ಸಂಬಂಧಿತ ನಿರ್ಬಂಧಗಳನ್ನು ತೆಗೆಯುವುದಾಗಿ ಮಂಗಳವಾರ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವನ್ನು ಇಂಗ್ಲೆಂಡ್‌ನಲ್ಲಿ ಆಯೋಜಿಸಲಾಗಿತ್ತು. ಈ ಪಂದ್ಯಕ್ಕೆ ಗರಿಷ್ಟ 4,000 ಪ್ರೇಕ್ಷಕರಿಗೆ ಮಾತ್ರವೇ ಅವಕಾಶವನ್ನು ನೀಡಲಾಗಿತ್ತು.

ಸದ್ಯ ಭಾರತ ತಂಡದ ಆಟಗಾರರಿಗೆ ವಿರಾಮ ನೀಡಲಾಗಿದ್ದು, ಜುಲೈ 14ರಿಂದ ಮತ್ತೆ ತಂಡ ಮರಳಲಿದ್ದು ಮುಂದಿನ ಸರಣಿಗೆ ಸಿದ್ಧತೆಯನ್ನು ಆರಂಭಿಸಲಿದೆ. ನಾಟಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಆಡಲಿದ್ದು, ಅದಕ್ಕೂ ಮುನ್ನ ಭಾರತ ಅಭ್ಯಾಸ ಪಂದ್ಯವೊಂದರಲ್ಲಿ ಭಾಗಿಯಾಗಲಿದೆ. ‘ಸೆಲೆಕ್ಟ್ ಕೌಂಟಿ XI’ ವಿರುದ್ಧ ವಿರಾಟ್ ಕೊಹ್ಲಿ ಬಳಗ ಅಭ್ಯಾಸ ಪಂದ್ಯವನ್ನು ಆಡಲಿದೆ. ಮೂರು ದಿನಗಳ ಈ ಅಭ್ಯಾಸ ಪಂದ್ಯ ಜುಲೈ 20-22ರ ವರೆಗೆ ನಡೆಯುವ ಸಾಧ್ಯತೆಯಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಸಿನಿಮಾ

0 ಸ್ಯಾಂಡಲ್ ವುಡ್ ಹಿರಿಯ ನಟ ದ್ವಾರಕೀಶ್ ವಿಧಿವಶರಾಗಿದ್ದಾರೆ.  ಅವರಿಗೆ 81 ವರ್ಷ ವಯಸ್ಸಾಗಿತ್ತು. ದ್ವಾರಕೀಶ್ ಅವರಿಗೆ ಆರೋಗ್ಯ ಹದಗೆಟ್ಟ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಬೆಳಗಿನ ಜಾವ ಹೃದಯಾಘಾತದಿಂದ ಅವರು...

ರಾಷ್ಟ್ರೀಯ

0 ಅಯೋಧ್ಯೆ :  ಈ ಬಾರಿಯ ರಾಮನವಮಿ ಬಹಳ ವಿಶೇಷ. ಯಾಕೆಂದರೆ, ಇದೇ ಮೊದಲ ಬಾರಿಗೆ ಬಾಲರಾಮನ ಮೂರ್ತಿಯ ಹಣೆಯ ಮೇಲೆ ಸೂರ್ಯ ತಿಲಕವನ್ನು ಇಡಲಾಗುತ್ತದೆ. ಹಾಗಾಗಿ ಇಡೀ ಅಯೋಧ್ಯೆ ರಾಮನವಮಿ ಸಂಭ್ರಮ...

ಅಂತಾರಾಷ್ಟ್ರೀಯ

1 ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಅದರ ಸುತ್ತಮುತ್ತಲಿನ ದೇಶಗಳಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದೆ. ಮರುಭೂಮಿಯ ಊರಾದ ಯುಎಇಯಲ್ಲಿ ಎಲ್ಲೆಂದರಲ್ಲಿ ನೀರು ಕಾಣುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದಿಂದಾಗಿ ಹಲವು ನಗರಗಳಿಗೆ...

ಸಿನಿಮಾ

0 ಮುಂಬೈ: ಸೋಷಿಯಲ್ ಮೀಡಿಯಾ ಲೋಕದಿಂದ ದುಃಖದ ಸುದ್ದಿಯೊಂದು ಬಂದಿದೆ. ಜನಪ್ರಿಯ ಯೂಟ್ಯೂಬರ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ದವಾಗಿದ್ದ ಅಬ್ರದೀಪ್ ಸಹಾ ಅಲಿಯಾಸ್ ಆಂಗ್ರಿ ರಾಂಟ್‌ಮ್ಯಾನ್ 27 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಯೂಟ್ಯೂಬರ್ ಏಪ್ರಿಲ್...

ರಾಷ್ಟ್ರೀಯ

0 ಅಯೋಧ್ಯೆ: ಪ್ರಭು ಶ್ರೀರಾಮನ ಹಣೆಯ ಮೇಲೆ ವೈಭವನದ ಸೂರ್ಯತಿಲಕ ಇಡಲಾಗಿದೆ. ಈ ದೃಶ್ಯವನ್ನು ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರ ಮಾಡಲಾಗಿದೆ. ರಾಮನ ಹಣೆಯ ಮೇಲೆ ಮೂಡಿದ ಸೂರ್ಯ ತಿಲಕ ಆಕರ್ಷಕವಾಗಿ ಕಂಡಿದೆ. ಇದೇ...

error: Content is protected !!