ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಟಿಪ್ಪರ್ ನ ಟೈರ್ ಬ್ಲಾಸ್ಟ್ ಆಗಿ ಕಾರಿಗೆ ಡಿಕ್ಕಿ ಹೊಡೆದಿರುವ ಘಟನೆ ಸೋಮವಾರ ಸಂಜೆ ಜರ್ವತ್ತು ಬಳಿ ನಡೆದಿದೆ. ಹೆಬ್ರಿಯಿಂದ ಕಾರ್ಕಳದ ಕಡೆಗೆ ಹೋಗುತ್ತಿದ್ದ ಟಿಪ್ಪರ್ ನ ಟಯರ್ ಬ್ಲಾಸ್ಟ್ ಆಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಬಲಬದಿಗೆ ಸಂಚರಿಸಿದ ಕಾರಣ ವರಂಗದ KEL ಫ್ಯಾಕ್ಟರಿಯಿಂದ ಹೆಬ್ರಿ ಕಡೆ ಬರುತ್ತಿದ್ದ ಮಾರುತಿ ಸ್ವಿಫ್ಟ್ ಡಿಸೈರ್ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆ ಬದಿಯ ಚರಂಡಿಗೆ ಬಿದ್ದಿದೆ.
ಕಾರಿನ ಬಲಗಡೆಯ ಡೋರ್ ಗಳು ಸಂಪೂರ್ಣ ನುಜ್ಜುಗುಜ್ಜಾಗಿವೆ. ಕಾರಿನಲ್ಲಿ ಚಾಲಕ ರೊಬ್ಬರೆ ಇದ್ದರು ಎಂದು ತಿಳಿದುಬಂದಿದೆ .ಟಿಪ್ಪರ್ ಚಾಲಕನ ವಿರುದ್ಧ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
Advertisement. Scroll to continue reading.