Connect with us

Hi, what are you looking for?

Diksoochi News

ರಾಜ್ಯ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ವೇಳಾ ಪಟ್ಟಿ ಪ್ರಕಟ

0

ಬೆಂಗಳೂರು : ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಇಂದಿನ ದ್ವಿತೀಯ ಪಿಯುಸಿ ಫಲಿಂತಾಶ ತಿರಸ್ಕರಿಸಿರುವಂತಹ ವಿದ್ಯಾರ್ಥಿಗಳಿಗೆ ಆಗಸ್ಟ್ 19, 2021ರಿಂದ ವಾರ್ಷಿಕ ಪರೀಕ್ಷೆ ನಡೆಸಲಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪರೀಕ್ಷಾ ವೇಳಾ ಪಟ್ಟಿ ಪ್ರಕಟಿಸಿದೆ.

ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, 2020-21ನೇ ಸಾಲಿನ ದ್ವಿತೀಯ ಪಿಯುಸಿ ಘೋಷಿತ ಫಲಿತಾಂಶದಲ್ಲಿ ಏನಾದರೂ ವ್ಯತ್ಯಾಸಗಳಿದ್ದಲ್ಲಿ, ಪರೀಕ್ಷೆ ಬರೆಯಬೇಕೆಂದು ಬಯಸಿದ್ದಲ್ಲಿ ಜುಲೈ 26 ರೊಳಗೆ ಪೂರಕ ದಾಖಲೆಗಳನ್ನು ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಪ್ರಾಂಶುಪಾಲರೇ ಖುದ್ದಾಗಿ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳನ್ನು ಅಥವಾ ಪೋಷಕರನ್ನು ಕಛೇರಿಗೆ ಕಳುಹಿಸುವಂತಿಲ್ಲ.

ಜಿಲ್ಲಾ ಉಪ ನಿರ್ದೇಶಕರು ಈ ದಾಖಲೆಗಳನ್ನು ಕ್ರೂಢೀಕರಿಸಿ, ಕೇಂದ್ರ ಕಚೇರಿಗೆ ಜುಲೈ 28 ರ ಒಳಗೆ ತಲುಪಿಸುವಂತೆ ಸೂಚಿಸಲಾಗಿದೆ.

Advertisement. Scroll to continue reading.

2020-21ನೇ ಸಾಲಿನ ತಾತ್ಕಾಲಿಕೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ

  • 19-08-2021 – ಐಚ್ಛಿಕ ಕನ್ನಡ, ಗಣಿತ, ಬೇಸಿಕ್ ಮ್ಯಾಥ್ಸ್
  • 21-08-2021- ಕನ್ನಡ
  • 23-08-2021 – ಜಿಯಾಗ್ರಫಿ, ಸೈಕಾಲಜಿ, ಫಿಜಿಕ್ಸ್
  • 24-08-2021 – ಇಂಗ್ಲೀಷ್
  • 25-08-2021 – ಅಕೌಂಟೆನ್ಸಿ, ಜಿಯೋಲಜಿ, ಎಜುಕೇಷನ್, ಹೋಂ ಸೈನ್ಸ್
  • 27-08-2021 – ಹಿಸ್ಟರಿ, ಸ್ಟಾಟಸ್ಟಿಕ್ಸ್
  • 30-08-2021- ಎಕನಾಮಿಕ್ಸ್
  • 31-08-2021 – ಉರ್ದು, ಸಂಸ್ಕೃತ
  • 01-09-2021 – ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ಸೋಷಿಯಾಲಜಿ, ಬಯೋಲಜಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
  • 02-09-2021 – ಲಾಜಿಕ್, ಬ್ಯುಸಿನೆಸ್ ಸ್ಟಡೀಸ್, ಕೆಮಿಸ್ಟ್ರಿ
  • 03-09-2021 – ಹಿಂದಿ

Click to comment

Leave a Reply

Your email address will not be published. Required fields are marked *

You May Also Like

ರಾಜ್ಯ

1 ಬೆಂಗಳೂರು:  ಪ್ರಧಾನಿ ಮೋದಿ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಶಿವರಾಜ ತಂಗಡಗಿ ವಿರುದ್ಧ ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ದೂರು...

ರಾಷ್ಟ್ರೀಯ

1 ಬೆಂಗಳೂರು: ಎನ್‌ಡಿಎ ಮೈತ್ರಿಕೂಟದಡಿ ‘ಅಬ್‌ ಕಿ ಬಾರ್‌ 400 ಪಾರ್‌’ ಘೋಷಣೆ ಮೊಳಗಿಸಿರುವ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ 370 ಸ್ಥಾನ ಗೆಲ್ಲುವ ಮಹತ್ವಾಕಾಂಕ್ಷೆ ಹೊಂದಿದೆ. ಈ ಗುರಿ ತಲುಪಲು ಟಿಕೆಟ್‌ ಹಂಚಿಕೆ...

ಅರೆ ಹೌದಾ!

0 ಬೆಂಗಳೂರು: ಫ್ರೀ ಟಿಕೆಟ್‌ ಎಂದು ಪಕ್ಷಿಗಳನ್ನು ಜೊತೆಗಿಟ್ಟುಕೊಂಡು ಬಸ್‌ ಹತ್ತಿದ್ದ ಅಜ್ಜಿ – ಮೊಮ್ಮಗಳಿಗೆ ಕಂಡಕ್ಟರ್‌ ನೀಡಿದ ಟಿಕೆಟ್‌ ದೊಡ್ಡ ಶಾಕ್‌ ನೀಡಿದೆ. ಪಕ್ಷಿಗಳಿಗೆ ಟಿಕೆಟ್ ನೀಡಬೇಕೆನ್ನುವುದು ನಿಯಮವಾದರೂ ನೀಡಿದ ಟಿಕೆಟ್...

ರಾಷ್ಟ್ರೀಯ

1 ಬೆಂಗಳೂರು: ದೆಹಲಿ ಮದ್ಯ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ಅರವಿಂದ್‌ ಕೇಜ್ರಿವಾಲ್‌ ಅವರು ಖಲಿಸ್ತಾನಿ ಗುಂಪುಗಳಿಂದ 16 ಮಿಲಿಯನ್‌ ಡಾಲರ್‌ (ಅಂದಾಜು 133.54 ಕೋಟಿ ರು.) ಪಡೆದಿರುವ ಗಂಭೀರ ಆರೋಪ ಕೇಳಿ ಬಂದಿದೆ. ಭಾರತಕ್ಕೆ...

ರಾಷ್ಟ್ರೀಯ

0 ಮುಂಬೈ: ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದ ವಿದ್ಯಾರ್ಥಿಯನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ  ಥಾಣೆಯಲ್ಲಿ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿ ಸಲ್ಮಾನ್‌ ಮೌಲ್ವಿ ಎಂದು ತಿಳಿದುಬಂದಿದೆ. ಈತ ಹೊಸ ಮನೆ ಕಟ್ಟಲು...

error: Content is protected !!