ಕರೋನ ಮಹಾಮಾರಿ ರೋಗದ ಭೀತಿಯ ನಡುವೆ ನಡೆಯುತ್ತಿರುವಂತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸರಳವಾಗಿ ಚಾಲನೆ ನೀಡಲಾಗಿದೆ. ಭಾರತ ದೇಶದ ಪರ 20 ಮಂದಿ ಆಟಗಾರರು ಈ ಪಥಸಂಚಲದಲ್ಲಿ ಭಾಗಿಯಾಗಿದ್ದರು. ಭಾರತದ ಬಾಕ್ಸರ್ ಮೇರಿ ಕೋಮ್ ಹಾಗೂ ಹಾಕಿ ತಂಡದ ನಾಯಕ ಮನ್ಪ್ರೀತ್ ಸಿಂಗ್ ಭಾರತದ ತ್ರಿವರ್ಣ ಧ್ವಜ ಹಿಡಿದು ಜಪಾನ್ನ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಹೆಜ್ಜೆ ಹಾಕಿದರು.
ತಮ್ಮ ಕಚೇರಿಯಲ್ಲಿ ಟಿವಿ ಮೂಲಕ ಕ್ರೀಡಾಕೂಟವನ್ನು ನೋಡುತ್ತಿದ್ದ ಪ್ರಧಾನಿ ಮೋದಿಯವರು ತೆರೆ ಮೇಲೆ ಭಾರತದ ಆಟಗಾರರು ಬರುತ್ತಿದ್ದ ವೇಳೆ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದರು. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೂಡ ಆಟಗಾರರನ್ನು ಚಪ್ಪಾಳೆ ತಟ್ಟಿ ಸ್ವಾಗತಿಸುವ ಮೂಲಕ ಹುರಿದುಂಬಿಸಿದರು.
Advertisement. Scroll to continue reading.