2021 ರ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಹಾಕಿ ಪಂದ್ಯಾವಳಿಯಲ್ಲಿ ಭಾರತ ತನ್ನ ಮೊದಲ ಸವಾಲನ್ನು ಯಶಸ್ವಿಯಾಗಿ ಗೆದ್ದಿದೆ. ಭಾರತ ಹಾಕಿ ತಂಡ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 3-2 ಅಂತರದಿಂದ ಎದುರಾಳಿ ತಂಡವನ್ನು ಸೋಲಿಸುವ ಮೂಲಕ ಭಾರತ ಶುಭಾರಂಭ ಮಾಡಿದೆ.
ಈ ಪಂದ್ಯದಲ್ಲಿ ಪೆನಾಲ್ಟಿ ಕಾರ್ನರ್ನ ಮೂಲಕ ಮೂರು ಗೋಲುಗಳು ಬಾರಿಸುವ ಮೂಲಕ ಭಾರತ ತಂಡ ಜಯ ಸಾಧಿಸಿದೆ. ಭಾರತದ ಪರ ಹರ್ಮನ್‌ಪ್ರೀತ್ ಎರಡು ಬಾರಿ ಗೋಲು ಬಾರಿಸಿದರೆ ಒಂದು ಗೋಲನ್ನು ರೂಪಿಂದರ್ ಮೂಲಕ ತಂಡ ದ ಗೆಲುವು ಸಾಧಿಸಿತು.
ಇನ್ನೂ ಆರ್ಚರಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತ ತಂಡ ಮೊದಲ ಯಶಸ್ಸು ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಭಾರತದ ಮಿಶ್ರಡಬಲ್ಸ್ ಜೋಡಿಗಳದ ದೀಪಿಕಾ ಕುಮಾರಿ ಮತ್ತು ಪ್ರವೀಣ್ ಜಾದವ್ ಚೈನೀಸ್ ತೈಪೆ ಜೋಡಿಯ ವಿರುದ್ಧ 5-3 ಅಂತರದಿಂದ ಗೆಲುವು ಸಾಧಿಸಿದೆ ಕ್ವಾರ್ಟರ್‌ಫೈನಲ್ ಗೆ ಲಗ್ಗೆ ಇಟ್ಟಿದೆ.
ಮುಂದಿನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೌತ್ ಕೊರಿಯಾ ತಂಡವನ್ನು ಎದುರಿಸಲಿದ್ದಾರೆ.

ಮಹಿಳೆಯರ 10 ಮೀಟರ್ಸ್ ಏರ್ ರೈಫಲ್ಸ್ ವಿಭಾಗದಲ್ಲಿ ಭಾರತೀಯ ಶೂಟರ್‌ಗಳದ ಇಳವೆನ್ನಿಲ ವಾಳರಿವನ್ ಹಾಗೂ ಅಪೂರ್ವಿ ಚಾಂಡೇಲ ಮುಂದಿನ ಹಂತಕ್ಕೆ ಅರ್ಹತೆ ಗಿಟ್ಟಿಸುವಲ್ಲಿ ವಿಫಲರಾಗಿದ್ದಾರೆ.