ಕೋಟ: ಶ್ರೀ ಕ್ಷೇತ್ರ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದಲ್ಲಿ ಪ್ರತಿವರ್ಷ ನಡೆಸಲ್ಪಡುವ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಸರಕಾರದ ಮಾರ್ಗಸೂಚಿಯಂತೆ ಸರಳ ರೀತಿಯಲ್ಲಿ ಆಚರಿಸಲಾಯಿತು. ದೇವಳದಲ್ಲಿ ಭಕ್ತರ ಸಂಖ್ಯೆ ಅಧಿಕವಾದರೂ ಸ್ವಯಂ ಸೇವಕರ ಮೂಲಕ ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ದೇವಿಗೆ ವಿಶೇಷ ಅಲಂಕಾರ ಮೂಲಕ ವರಮಹಾಲಕ್ಷ್ಮೀ ಪೂಜಾ ಕಾರ್ಯ ನೆರವೇರಿತು.
ದೇವಳ ಆಡಳಿತ ಮಂಡಳಿಯ ಪದಾಧಿಕಾರಿಗಳು, ಅರ್ಚಕ ವೃಂದ ಉಪಸ್ಥಿತಿಯ ಮೂಲಕ ಸರಳ ರೀತಿಯ ಕಾರ್ಯಕ್ರಮ ನೆರವೇರಿತು.
Advertisement. Scroll to continue reading.