ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಹಲವಾರು ಸಮಯದಿಂದ ಶಾಲೆಗಳು ಮುಚ್ಚಿವೆ. ಸೋಮವಾರದಿಂದ 6 ರಿಂದ 9 ನೇ ತರಗತಿಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಬ್ರಹ್ಮಾವರ ಭಾಗದ ಶಾಲೆಯಲ್ಲಿ, ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಪೋಷಕರು ಸಂಭ್ರಮದಿಂದ ಶಾಲೆಗೆ ಆಗಮಿಸಿದರು.
126 ವರ್ಷ ಇತಿಹಾಸದ ಬ್ರಹ್ಮಾವರ ಬೋರ್ಡ್ ಶಾಲೆ ಎಂದು ಪರಿಚಿತವಾಗಿ ಅತೀ ಹೆಚ್ಚು 575 ವಿದ್ಯಾರ್ಥಿಗಳನ್ನು ಹೊಂದಿರುವ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂದು ಬೆಳಿಗ್ಗೆ ಉಡುಪಿ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕ . ಎನ್ . ಎಚ್ ನಾಗೂರ ಬೆಳಿಗ್ಗೆ ಇಲ್ಲಿನ ಶಾಲಾ ವಿದ್ಯಾರ್ಥಿಗಳಿಗೆ ಹೂವನ್ನು ನೀಡಿ ಮಕ್ಕಳನ್ನು ಸ್ವಾಗತಿಸಿದರು.
ಈ ಸಂದರ್ಭ ಶಾಲಾ ಮುಖ್ಯೋಪದ್ಯಾಯಿನಿ ಜ್ಯೋತಿ ಮತ್ತು ಶಿಕ್ಷಕ ವೃಂದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪಾಂಡುರಂಗ ಕುಲಾಲ್ ಸದಸ್ಯರುಗಳಾದ ಅರುಣ್ ಭಂಡಾರಿ ಬೈಕಾಡಿ ಇನ್ನಿತರರು ಅವರನ್ನು ಬರಮಾಡಿಕೊಂಡರು. ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಆಗಮಿಸಿದ್ದು, ಶಾಲೆಯಲ್ಲಿ ತಳಿರು ತೋರಣ ಮತ್ತು ರಂಗವಲ್ಲಿ ಹಾಕಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಬಳಿಕ ಇಲ್ಲಿನ ತರಗತಿಯಲ್ಲಿ ಸ್ವತಃ ಅವರು ಪಾಠ ಮಾಡಿ ವಿದ್ಯಾರ್ಥಿಗಳಿಗೆ ಉತ್ಸಾಹ ತುಂಬಿದರು.
85 ಮಂದಿ ವಿದ್ಯಾರ್ಥಿಗಳು ಇರುವ 7 ನೇ ತರಗತಿಯಲ್ಲಿ ಮಾತ್ರ ಇಂದು ಪಾಠ ನಡೆಯಿತು. ನಾಳೆ 6 ನೇ ತರಗತಿ ಆರಂಭವಾಗಲಿದೆ. ಈ ಸಂದರ್ಭ ಇಲ್ಲಿ ಪ್ರತಿ ವರ್ಷ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಹೆಚ್ಚಳಕ್ಕೆ 6 ತರಗತಿ ಕೊಠಡಿ ಮತ್ತು 6 ಶಿಕ್ಷಕಿಯರ ಕೊರತೆಯನ್ನು ನೀಗಿಸುವಂತೆ ಉಪ ನಿರ್ದೇಶಕರಲ್ಲಿ ಶಾಲಾಭಿವೃದ್ಧಿ ಸಮಿತಿಯವರು ಮನವಿ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಓ.ಆರ್ ಪ್ರಕಾಶ್ . ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರಘುನಾಥ್, ಪ್ರೌಢ ಶಿಕ್ಷಣ ಸಂಯೋಜಕ ರಾಘವ ಶೆಟ್ಟಿ ಆಗಮಿಸಿದ್ದರು.
Advertisement. Scroll to continue reading.