ಸಿನಿಮಾ

ವಿಭಿನ್ನ ಗೆಟಪ್ ನಲ್ಲಿ ಶುಭಾ ಪುಂಜಾ; ಕುತೂಹಲ ಹೆಚ್ಚಿಸಿದೆ ಅಂಬುಜ ಚಿತ್ರದ ಫಸ್ಟ್ ಲುಕ್ ಪೋಸ್ಟರ್

0

ವರದಿ : ದಿನೇಶ್ ರಾಯಪ್ಪನಮಠ

ಬೆಂಗಳೂರು: ಬಿಗ್ ಬಾಸ್ ನಂತರ ಶುಭಾಪುಂಜಾ ಇದೀಗ ಹೊಸ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೂ ಲಂಬಾಣಿ ಹುಡುಗಿಯಾಗಿ ತೆರೆ ಮೇಲೆ ರಂಜಿಸಲು ಸಿದ್ಧರಾಗಿದ್ದಾರೆ.2018ರಲ್ಲಿ ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹು ನಿರೀಕ್ಷೆಯನ್ನು ಹುಟ್ಟಿಸಿ ಪ್ರೇಕ್ಷಕರನ್ನು ಗಮನಸೆಳೆದ ಕೆಲವು ದಿನಗಳ ನಂತರ ಎನ್ನುವ ಸಿನಿಮಾದ ನಿರ್ದೇಶಕ ಶ್ರೀನಿ ಇದೀಗ ಹೊಸತೊಂದು ಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಅಂಬುಜದ ಪಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿಲಾಗಿದ್ದು ಕುತೂಹಲ ಹೆಚ್ಚಿದೆ.

ಚಿತ್ರದಲ್ಲಿ ಪದ್ಮಜಾ ರಾವ್, ಕಾಮಿಡಿ ಕಿಲಾಡಿ ಗೋವಿಂದೇಗೌಡ, ಕಾಮಿಡಿಕಿ ಲಾಡಿ ನಿರ್ದೇಶಕ ಶರಣಯ್ಯ, ಸಂದೇಶ್ ಶೆಟ್ಟಿ ಅಜ್ರಿ, ಮಜಾಭಾರತದ ಪ್ರಿಯಾಂಕ ಕಾಮತ್, ಬೇಬಿ ಆಕಾಂಕ್ಷ ಮೊದಲಾದವರು ಪಾತ್ರವಾಗಿದ್ದಾರೆ. ಈ ಚಿತ್ರಕ್ಕೆ ಕಾಶೀನಾಥ್ ಮಡಿವಾಳರ್ ಅವರು ಕಥೆಯನ್ನು ಬರೆದು, ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಮುರಳೀಧರ್ ಕ್ಯಾಮೆರಾ ವರ್ಕ್ ಹಾಗೂ ಸಂಗೀತವನ್ನು ಪ್ರಸನ್ನ ಕುಮಾರ್ ಹಾಗೂ ಹಿನ್ನೆಲೆ ಸಂಗೀತವನ್ನು ಎಂ.ಎಸ್ ತ್ಯಾಗರಾಜರ ವರು ಮಾಡಲಿದ್ದು ಚಿತ್ರ ಮುಂದಿನ ತಿಂಗಳು ಚಿತ್ರೀಕರಣಕ್ಕೆ ಹೋಗಲು ಸಕಲ ಸಿದ್ಧತೆ ಮಾಡಿಕೊಂಡಿದೆ.

Advertisement. Scroll to continue reading.

ಸಾಮಾನ್ಯ ಜನರ ಕಥೆ ಅಂಬುಜ :

ಸಮಾಜದಲ್ಲಿ ಆಗುವ ಒಂದಷ್ಟು ಅವಘಡಗಳು ಹೇಗೆ ಸಾಮಾನ್ಯ ಜನರ ಬದುಕನ್ನ ಹಾಳು ಮಾಡುತ್ತದೆ. ಹಾಗೂ ಅವರು ಅನುಭವಿಸುವ ತೊಂದರೆಗಳೇನು…? ಅವರ ಅಸಹಾಯಕತೆಯನ್ನ ಸಮಾಜ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಜ್ಞಾನ-ವಿಜ್ಞಾನ-ಅಜ್ಞಾನಗಳ ಒಟ್ಟು ಚಿತ್ರಣವೇ ಅಂಬುಜ ಸಿನಿಮಾದ ಹೈಲೆಟ್ಸ್ ಆಗಿದೆ ಹಾಗೂ ಅಂಬುಜ ಒಂದು ಮಹಿಳಾ ಪ್ರಧಾನ ಹಾಗೂ ನೈಜ ಘಟನೆಯಾಧಾರಿತ ಚಿತ್ರವಾಗಿದೆ ಮತ್ತು ಈ ಚಿತ್ರದಲ್ಲಿ ಬರುವ ಲಂಬಾಣಿ ಪಾತ್ರದ ವಸ್ತ್ರ ಹಾಗೂ ಆಭರಣಗಳನ್ನು ರರೆಡಿಮಾಡಲು ಚಿತ್ರತಂಡ ನಾಲ್ಕು ತಿಂಗಳುಗಳು ತೆಗೆದುಕೊಂಡಿದೆ ಹಾಗೂ ಗದಗ ಜಿಲ್ಲೆಯ ಒಂದು ಲಂಬಾಣಿ ತಾಂಡಾದಲ್ಲಿ ಸುಮಾರು 4ತಿಂಗಳು ಇದನ್ನು ತಯಾರು ಮಾಡಲು ಸಮಯ ನೀಡಿದ್ದೇವೆ ಎಂದು ನಿರ್ದೇಶಕ ಶ್ರೀನಿ ಮತ್ತು ನಿರ್ಮಾಪಕ ಕಾಶೀನಾಥ್ ಮಡಿವಾಳರ್ ಹೇಳಿದರು.

ಲಂಬಾಣಿ ವಸ್ತ್ರಾಲಂಕಾರದ ತೂಕ ಬರೋಬ್ಬರಿ – 20KG.ಯಿದೆ ಇದನ್ನು ಇಡೀ ಸಿನಿಮಾದಲ್ಲಿ ಶುಭಾಪುಂಜಾ ಹಾಕಿಕೊಂಡು ಚಿತ್ರೀಕರಣ ಮಾಡುವುದೇ ದೊಡ್ಡ ಸಾಹಸ ಎಂದು ಚಿತ್ರತಂಡ ಹೇಳಿದೆ..

ಇದೀಗ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಅಕ್ಟೋಬರ್ ತಿಂಗಳಲ್ಲಿ ಒಂದೇ ಶೆಡ್ಯೂಲ್ ನಲ್ಲಿ ಚಿತ್ರೀಕರಣ ಶುರು ಮಾಡಲಿದೆ ಚಿತ್ರತಂಡ ಹಾಗೂ ಚಿತ್ರದ ಚಿತ್ರೀಕರಣ ಬೆಂಗಳೂರು, ಗದಗ, ಹಾಗೂ ಚಿಕ್ಕ ಮಂಗಳೂರು ಉಡುಪಿ ಕುಂದಾಪುರ ಭಾಗಗಳಲ್ಲಿ ನಡೆಯಲಿದೆಯಂತೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com