ಬ್ರಹ್ಮಾವರ : ನೆಮ್ಮದಿಯ ಜೀವನಕ್ಕೆ ಆರೋಗ್ಯ ಮುಖ್ಯ : ಪೇಜಾವರ ಸ್ವಾಮೀಜಿ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಆಧುನಿಕ ವ್ಯವಸ್ಥೆಗೆ ಒಗ್ಗಿಕೊಂಡಿರುವ ನಾವು ನಮ್ಮ ಜೀವನ ಕ್ರಮವನ್ನು ಬದಲಾಯಿಸಿಕೊಂಡಿದ್ದೇವೆ. ಅನಾರೋಗ್ಯ ಸಮಸ್ಯೆಯೂ ಹೆಚ್ಚಿಸಿಕೊಂಡಿದ್ದೇವೆ. ಹಿಂದಿನವರ ಜೀವನ ಶೈಲಿಯನ್ನು ನಾವು ಅರಿತು ಮುನ್ನಡೆದಲ್ಲಿ ಮಾತ್ರ ನೆಮ್ಮದಿಯ ಆರೋಗ್ಯವಂತ ಜೀವನವನ್ನು ನಡೆಸಲು ಸಾಧ್ಯ ಎಂದು ಉಡುಪಿ ಪೇಜಾವರ ಮಠದ ಶ್ರೀ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರದ ವಠಾರದಲ್ಲಿರುವ ಜನೌಷಧಿ ಕೇಂದ್ರದಲ್ಲಿ ಭಾನುವಾರ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರದ ವತಿಯಿಂದ ಹಿರಿಯ ನಾಗರಿಕರಿಗೆ ನಡೆದ ಉಚಿತ ವೈದ್ಯಕೀಯ ಶಿಬಿರ ಮತ್ತು ಉಚಿತ ಔಷಧಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸಾಂಕೇತಿಕವಾಗಿ ಹಿರಿಯರನ್ನು ಗೌರವಿಸಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಸಚಿವ ಶ್ರೀನಿವಾಸ ಪೂಜಾರಿ ಮಾತನಾಡಿ ಜನಸಾಮಾನ್ಯರು ಮತ್ತು ಬಡವರಿಗೆ ಅನುಕೂಲವಾಗುವ ದೃಷ್ಟಿಯಿಂದ ದೇಶದಲ್ಲಿ ೮ಸಾವಿರಕ್ಕೂ ಮಿಕ್ಕಿ ಜನೌಷಧಿ ಕೇಂದ್ರಗಳು ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿವೆ. ಯಾವ ಮಧ್ಯವರ್ತಿಗಳು ಇಲ್ಲದೇ ಉತ್ತಮ ಗುಣಮಟ್ಟದ ಔಷಧಿಗಳು ಇಂದು ಜನರಿಗೆ ಸಿಗುತ್ತಿವೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಅನೇಕ ಕೋವಿಡ್ ಪೀಡಿತರು ಲಾಭ ಪಡೆದುಕೊಂಡಿದ್ದಾರೆ. ಹಿರಿಯ ನಾಗರಿಕರಿಗೆ ಗುಣಮಟ್ಟದ, ಶಕ್ತಿವರ್ಧಕ ಚಿಕಿತ್ಸೆಗಳು, ಔಷಧಿಗಳು ಇಂದು ಆಸ್ಪತ್ರೆಗಳಲ್ಲಿ ಸಿಗುತ್ತಿದೆ ಎಂದು ಹೇಳಿದರು. ಇದೇ ಸಂದರ್ಭ ಬ್ರಹ್ಮಾವರ ಪರಿಸರದ 75 ವರ್ಷ ತುಂಬಿದ 75 ಹಿರಿಯ ನಾಗರಿಕರಿಗೆ ಸನ್ಮಾನ, ಉಚಿತ ಆರೋಗ್ಯ ತಪಾಸಣೆ, ಆಪ್ತ ಸಮಾಲೋಚನೆ ಕಾರ್ಯಕ್ರಮ ಮತ್ತು ಕಿಟ್ ಗಳನ್ನು ನೀಡಲಾಯಿತು.
ಬ್ರಹ್ಮಾವರ ಜನೌಷಧಿ ಕೇಂದ್ರ ಕೇಂದ್ರದ ಸುಂದರ ಪೂಜಾರಿ ಮೂಡುಕುಕ್ಕುಡೆ, ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಜಿತ್ ಕುಮಾರ್ ಶೆಟ್ಟಿ, ಡಾ.ಮಹಾಬಲ, ಡಾ.ಮಹೇಶ್ ಐತಾಳ, ಜಯಂಟ್ಸ್ನ ಮಧುಸೂಧನ ಹೇರೂರು, ಮಿಲ್ಟನ್ ಒಲಿವೆರಾ, ರಾಘವೇಂದ್ರ ಪ್ರಭು ಶಿರ್ಲಾಲು, ಬ್ರಹ್ಮಾವರ ಮಹೇಶ್ ಆಸ್ಪತ್ರೆಯ ಡಾ.ಎಚ್.ಧನಂಜಯ ಭಟ್, ಉಡುಪಿಯ ಡಾ.ಸನತ್ ಎಸ್.ರಾವ್, ಡಾ.ಗಣೇಶ್ ಕಾಮತ್, ಡಾ.ಅರ್ಜುನ್ ಬಲ್ಲಾಳ್, ಮಣಿಪಾಲದ ಡಾ.ಸೌಮ್ಯ, ವೈದ್ಯಕೀಯ ಪ್ತತಿನಿಧಿಗಳ ಸಂಘದ ಪ್ರಸನ್ನ ಕಾರಂತ, ಜಯಂಟ್ಸ್ನ ಶ್ರೀನಾಥ್ ಕೋಟ, ಮಂಜುನಾಥ ಶೆಟ್ಟಿಗಾರ್, ವಿವೇಕಾನಂದ ಕಾಮತ್, ವಿಲ್ಸನ್ ಡಿಸಿಲ್ವ ಮತ್ತು ಜನೌಷಧಿಯ ಸಿಬ್ಬಂದಿ ಉಪಸ್ಥಿತರಿದ್ದರು. ನಂತರ ಹಲವಾರು ಸಂಘ ಸಂಸ್ಥೆಗಳ ನೆರವಿನಿಂದ ನುರಿತ ವೈದ್ಯರಿಂದ ಆರೋಗ್ಯ ಶಿಬಿರ ನಡೆಯಿತು.