ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಕಲೆ, ಸಾಹಿತ್ಯ, ಸಿನಿಮಾ ಲೋಕ ಸೇರಿದಂತೆ ಸಮಾಜದಲ್ಲಿರುವ ಪ್ರತೀ ಕುಟುಂಬದ ಮನಸ್ಸಿನಲ್ಲಿರುವ ವ್ಯಕ್ತಿ ಪುನೀತ್ ರಾಜ್ ಕುಮಾರ್. ಅವರ ಅಕಾಲಿಕ ಮರಣ ಕೇವಲ ಸಾಹಿತ್ಯ, ಸಿನಿಮಾ ಲೋಕಕ್ಕೆ ಮಾತ್ರವಲ್ಲ ಇಡೀ ಕರ್ನಾಟಕದ ಆರೂವರೆ ಕೋಟಿ ಜನರಿಗೂ ದುಃಖವುಂಟು ಮಾಡಿರುವ ಘಟನೆ. ಅವರಿಗೆ ಯಾವ ಪ್ರಶಸ್ತಿ ಕೊಟ್ಟರೂ ಕಡಿಮೆಯೇ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು. ಕುಂದಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸುನಿಲ್ ಕುಮಾರ್ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮುಂದಿನ ದಿನಗಳಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಅವರ ಗೌರವಕ್ಕೆ ತಕ್ಕಂತೆ ಸ್ಮಾರಕಗಳು ಸೇರಿದಂತೆ ಎಲ್ಲಾ ಗೌರವಗಳನ್ನು ಕೊಡಲಾಗುತ್ತೆ ಎಂದು ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಅದು ಕೊಡಿ, ಇದು ಕೊಡಿ ಎಂಬುದು ಶಿಷ್ಟಾಚಾರವಾಗುವುದಿಲ್ಲ. ಯಾರೇನೆ ಹೇಳಿದರು ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಕೊಡಲು ಸರ್ಕಾರ ಸಿದ್ಧವಾಗಿದೆ ಎಂದರು.
Advertisement. Scroll to continue reading.