ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಕಾಂಗ್ರೆಸ್ ವ್ಯಂಗ್ಯ ಬಿಟ್ರೆ ಮತ್ತೇನು ಮಾಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ಬಡತನವೂ ಸೇರಿದಂತೆ ಅಸ್ಪ್ರಶ್ಯತೆ ಎಲ್ಲವೂ 60 ವರ್ಷದ ಆಡಳಿತದಲ್ಲಿ ಕಾಂಗ್ರೆಸ್ ನೀಡಿರುವ ಗಿಫ್ಟ್ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಈ ಬಗ್ಗೆ ಕುಂದಾಪುರದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಸಾಮಾನ್ಯವಾಗಿ ಕೊರೋನಾ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಕೆಲವು ಅನಿಲಗಳು, ಪೆಟ್ರೋಲ್, ಡಿಸೀಲ್ ಬೆಲೆ ಏರಿಳಿಕೆ ಆಗಿವೆ. ಇದು ಕಾಂಗ್ರೆಸ್ ಆಡಳಿತದಲ್ಲಿದ್ದಾಗಲೂ ಆಗಿದೆ. ಹಾಗಾಗಿ 60 ವರ್ಷ ಆಡಳಿತ ನಡೆಸಿದವರು, ಇವತ್ತು ವ್ಯವಸ್ಥಿತವಾಗಿ ಆಡಳಿತ ನಡೆಸುವವರ ಮೇಲೆ ಟೀಕೆ ಮಾಡುವುದು ಅವರ ಒಟ್ಟು ಭೌತಿಕ ನಂಬಿಕೆ ಕಳೆದುಕೊಂಡಿದ್ದಾರೆ ಎಂಬುದನ್ನು ಸೂಚಿಸುತ್ತದೆ ಎಂದರು.
ಗ್ರಾ.ಪಂ.ನವರು ಒಂದನೇ ವಲಯ, ಎರಡನೇ ವಲಯ, ಮೂರನೇ ವಲಯದಲ್ಲಿ ಮರುಳುಗಾರಿಕೆಗೆ ನಮಗೆ ಅವಕಾಶ ಬೇಕು ಎಂದಿದ್ದು, ಗಣಿ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಈ ಬಗ್ಗೆ ಪರಿಶೀಲನೆ ನಡೆಸಿ, ನ್ಯಾಯಯುತ ತೀರ್ಮಾನ ಮಾಡಿ ಎಂದಿದ್ದೇನೆ. ಈ ನಡುವೆ ಅನುಮತಿ ಪಡೆದ ಜಾಗದ ಮರಳು ತೆಗೆದಲ್ಲಿ ಕೆಲವರು ಮನೆ ಕಟ್ಟಲು ನಮಗೆ ತೊಂದರೆಯಾಗುತ್ತದೆ ಎಂದಿದ್ದಾರೆ. ಹಾಗಾಗಿ ಎರಡನ್ನೂ ಪರಿಶೀಲಿಸಿ ಗ್ರಾ.ಪಂ ದಕ್ಕನ್ನೂ ಉಳಿಸಿಕೊಂಡು, ಜನರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲು ತಿಳಿಸಲಾಗಿದೆ. ಕಲಂ 2, 3ರ ಪ್ರಕಾರ ಯಾವುದೇ ವ್ಯಕ್ತಿ ತನ್ನ ಪರಿಸರ, ಜಾಗದ ಮರಳು ಬಳಸುವುದಾದಲ್ಲಿ ಗ್ರಾ.ಪಂ. 300 ಕಟ್ಟಬೇಕು. ಹಾಗಾಗಿ ಯಾವುದಕ್ಕೂ ದಕ್ಕೆ ಆಗದಂತೆ ನೋಡಿಕೊಳ್ಳಬೇಕಿದೆ ಎಂದರು.
Advertisement. Scroll to continue reading.