ವಿಶ್ವ ಆರೋಗ್ಯ ಸಂಸ್ಥೆಯ (WHO) ಸ್ವತಂತ್ರ ಸಲಹಾ ಸಮಿತಿಯಾದ ತಾಂತ್ರಿಕ ಸಲಹಾ ಗುಂಪು ಕೋವ್ಯಾಕ್ಸಿನ್ ಲಸಿಕೆಯ ಜಾಗತಿಕ ಬಳಕೆಗಾಗಿ ಅಂತಿಮ ತುರ್ತು ಬಳಕೆ ಪಟ್ಟಿಗೆ ಸೇರಿಸಿದೆ.
ಲಸಿಕೆಯ ಅಪಾಯ-ಪ್ರಯೋಜನ ಮೌಲ್ಯಮಾಪನ ನಡೆಸುವ ಸಲುವಾಗಿ ಕೋವ್ಯಾಕ್ಸಿನ್ ಲಸಿಕೆ ತಯಾರಕ ಭಾರತ್ ಬಯೋಟೆಕ್ʼನಿಂದ ಹೆಚ್ಚುವರಿ ಸ್ಪಷ್ಟೀಕರಣಗಳನ್ನ ಡಬ್ಲ್ಯೂಹೆಚ್ಒ ಕೋರಿತ್ತು.
ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಮಿತಿಯು ಕೊವ್ಯಾಕ್ಸಿನ್ʼಗೆ ತುರ್ತು ಬಳಕೆ ಪಟ್ಟಿಯಲ್ಲಿ ಸೇರಿಸುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಇಂದು ಸಭೆ ಸೇರಿತ್ತು. ಸಧ್ಯ ಕೋವ್ಯಾಕ್ಸಿನ್ ಲಸಿಕೆಯ ಜಾಗತಿಕ ಬಳಕೆಗೆ ಡಬ್ಲ್ಯೂಹೆಚ್ಒ ಅನುಮೋದನೆ ನೀಡಿದೆ.
Advertisement. Scroll to continue reading.