ದಿಕ್ಸೂಚಿ ನ್ಯೂಸ್ ವಿಶೇಷ ವರದಿ : ದುಬೈ ರೋಡಿನಲ್ಲಿ `ಈಟ್ ರಾಜಾ’; ವೈರಲ್ ಆಯ್ತು ಸೈಕಲ್ ಮಿಕ್ಸಿ ರೈಡ್
Published
0
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಈಟ್ ರಾಜಾ ಜ್ಯೂಸ್ ಸೆಂಟರ್ ಯಾರಿಗೆ ತಾನೇ ಗೊತ್ತಿಲ್ಲ. ಭಾರತದ ಪ್ರಥಮ ಝೀರೋ ವೇಸ್ಟ್ ಜ್ಯೂಸ್ ಸೆಂಟರ್ ಇದು. ಪ್ಲಾಸ್ಟಿಕ್ ಬಳಸದೇ, ತ್ಯಾಜ್ಯ ರಹಿತವಾಗಿಯೇ ಇಲ್ಲಿ ಕೊಡುವ ಪಾನೀಯಗಳನ್ನು ಸವಿಯದವರು ಕಮ್ಮಿ. ಝೀರೋ ವೇಸ್ಟ್ ಪರಿಕಲ್ಪನೆಯೇ ಹೊಸದಾಗಿರುವಾಗ ಒಂದು ಸಲ ನೋಡೇ ಬಿಡ್ವಾ' ಅಂತ ಮಂದಿ ಬರ್ದೇ ಇರ್ತಾರೇನೂ...ಇತ್ತ ಬಂದವರು ಅಚ್ಚರಿಯ ಕಂಗಳೊಂದಿಗೆ ಪಾನೀಯವನ್ನು ಸವಿಯದೆ ಇರೋಲ್ಲ. ಕಪ್, ಸ್ಟ್ರಾ ಬಳಕೆ ಮಾಡದೆ, ಹಣ್ಣುಗಳನ್ನೇ ಕಪ್ ಆಗಿಸಿ ನೀಡಲಾಗುತ್ತೆ. ಇಂತಹ ಈಟ್ ರಾಜಾ ದುಬೈನತ್ತ ಪಯಣ ಬೆಳೆಸಿದ್ದಾರೆ. ಹೌದು, ಈಟ್ ರಾಜಾವನ್ನು ಹುಟ್ಟು ಹಾಕಿರುವ ಪ್ರತಿಭಾನ್ವಿತ ಆನಂದ್ ರಾಜ್ ದುಬೈ ಫಿಟ್ ನೆಸ್ ಚಾಲೆಂಜ್ ನ ಭಾಗವಾಗಿರುವದುಬೈ ರೈಡ್’ ನಲ್ಲಿ ಭಾಗವಹಿಸಿದರು. ದುಬೈನ ಅತ್ಯಂತ ಬಿಝಿ ರಸ್ತೆ ಶೇಖ್ ಸಯ್ಯದ್ ರಸ್ತೆಯಲ್ಲಿ ಈಟ್ ರಾಜಾ ಕಣ್ಮನ ಸೆಳೆದರು.
ಸೈಕಲ್ ಮಿಕ್ಸಿ ಮೂಲಕ ದುಬೈ ರೈಡ್ :
ಭಾರತದಲ್ಲಿ `ಝೀರೋ ವೇಸ್ಟ್’ ಈಟ್ ರಾಜಾ ಜ್ಯೂಸ್ ಸೆಂಟರ್ ಮೂಲಕ ಎಲ್ಲರ ಮನೆಮಾತಾಗಿರುವ ಆನಂದ್ ರಾಜಾ ದುಬೈ ರೈಡ್ ನಲ್ಲೂ ವಿಭಿನ್ನ ಪರಿಕಲ್ಪನೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅದೂ ತನ್ನ ವಿಭಿನ್ನ ಬಗೆಯ ಪರಿಕಲ್ಪನೆ ಸೈಕಲ್ ಮಿಕ್ಸಿ ಮೂಲಕ. ಆನಂದ್ ರಾಜಾನ ಈ ವಿಭಿನ್ನ ರೈಡ್ ಸಕತ್ ವೈರಲ್ ಆಗಿದೆ. ಸೈಕಲ್ ಮಿಕ್ಸಿಯಲ್ಲಿ ಈಟ್ ರಾಜನ ರೈಡ್ ನೋಡಿದವರೆಲ್ಲರು ಸಾಮಾಜಿಕ ಜಾಲತಾಣ ಫೋಟೋ, ವೀಡಿಯೋ ಹಂಚಿಕೊಂಡಿದ್ದಾರೆ. 14 ಮೀಟರ್ ನ ಈ ಸೈಕಲ್ ರೈ ನಲ್ಲಿ ತಮ್ಮ ಸ್ನೇಹಿತರಾದ ಆರ್ ಜೆ ಎರಾಲ್, ಅಝ್ಮಲ್, ಸಯ್ಯದ್ ಅಝಾನ್ ಜೊತೆ ಭಾಗವಹಿಸಿದರು.
ಕಷ್ಟಪಟ್ಟು ಮೇಲೆ ಬಂದ ಶ್ರಮಜೀವಿ :
Advertisement. Scroll to continue reading.
ಆನಂದ್ ರಾಜ್ 13 ವರ್ಷ ವಿವಿಧ ರೇಡಿಯೋ ಸ್ಟೇಷನ್ ಗಳಲ್ಲಿ ರೇಡಿಯೋ ಜಾಕಿ ಆಗಿ ಸೇವ ಸಲ್ಲಿಸಿರುವವರು ಆನಂದ್ ರಾಜ್. ಕ್ರಿಯಾಶೀಲ ವ್ಯಕ್ತಿ. ಪ್ರತಿಭಾನ್ವಿತ ಯುವಕ. ಶ್ರಮಜೀವಿ. ಆರಂಭದಲ್ಲಿ ತನ್ನ ತಾಯಿಯೊಂದಿಗೆ `ಈಟ್ ರಾಜಾ…ಅಮ್ಮ ಮಾಡಿದ್ದು’ ಜ್ಯೂಸ್ ಅಂಗಡಿ ಆರಂಭಿಸಿದ ಅವರು, ತಾಯಿಯ ನಿಧನದ ನಂತರ ತಾವೊಬ್ಬರೇ ಮುನ್ನಡೆಸುತ್ತಿದ್ದಾರೆ. ದೇಶದಲ್ಲಿ ಒಟ್ಟು 5 ಶಾಖೆಯನ್ನು ಈಟ್ ರಾಜಾ ಹೊಂದಿದೆ. ಸದ್ಯದಲ್ಲಿಯೇ ದುಬೈನಲ್ಲೂ ಈಟ್ ರಾಜಾ ಜ್ಯೂಸ್ ಸೆಂಟರ್ ಆರಂಭಗೊಳ್ಳಲಿದ್ದು, ಅಲ್ಲೂ ಈಟ್ ರಾಜಾ ಕಮಾಲ್ ಮಾಡಲಿದ್ದಾನೆ.
ಪ್ರಮಾಣಿಕ ಕೆಲಸಕ್ಕೆ ಯಶಸ್ಸು ಸಿಕ್ಕೇ ಸಿಗುತ್ತದೆ. ಕಷ್ಟ ಕಾಲದಲ್ಲಿ ನಾನು ನಂಬಿದ್ದ ಈ ಪರಿಕಲ್ಪನೆ ಕೈ ಹಿಡಿದಿದೆ. ಹೆಸರು, ಅವಕಾಶ, ಯಶಸ್ಸು, ಹೊಸ ಅವಕಾಶಗಳನ್ನು ಕೊಡುತ್ತಿದೆ. ಪ್ರಾಮಾಣಿಕವಾಗಿದ್ದರೆ, ಒಂದಲ್ಲ ಒಂದು ದಿನ ಬೆಲೆ ಸಿಗುತ್ತದೆ. ಹಾಗಾಗಿ ಪ್ರಮಾಣಿಕವಾಗಿರಿ.ಈಟ್ ರಾಜಾ ಖ್ಯಾತಿಯ ಆನಂದ್ ರಾಜ್
ಪರಿಸರಕ್ಕೆ ಹಾನಿಯುಂಟು ಮಾಡದ ಈ ಹೊಸ ಪರಿಕಲ್ಪನೆಯನ್ನು ಹುಟ್ಟು ಹಾಕಿ ಮಾದರಿಯಾಗಿರುವ ಈಟ್ ರಾಜಾ' ಆನಂದ್ ರಾಜ್ ಅವರಿಗೆ ದಿಕ್ಸೂಚಿ ನ್ಯೂಸ್’ ಕಡೆಯಿಂದ ಶುಭ ಹಾರೈಕೆಗಳು….ಆಲ್ ದಿ ಬೆಸ್ಟ್…