ಐದನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (NFHS-5) 2ನೇ ಹಂತದ ವರದಿಯ ಪ್ರಕಾರ, ಮೊದಲ ಬಾರಿಗೆ ಭಾರತದಲ್ಲಿ 1,000 ಪುರುಷರಿಗೆ 1,020 ಮಹಿಳೆಯರಿದ್ದಾರೆ ಎಂದು ತಿಳಿದುಬಂದಿದೆ.
ಯಾವುದೇ ಎನ್ ಎಫ್ ಎಚ್ ಎಸ್ ಸಮೀಕ್ಷೆ ಅಥವಾ ಜನಗಣತಿಯಲ್ಲಿ ಇದೇ ಮೊದಲ ಬಾರಿಗೆ ಲಿಂಗಾನುಪಾತದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ.
2005-06ರ ಎನ್ ಎಫ್ ಎಚ್ ಎಸ್-3 ವರದಿಯಲ್ಲಿ ಈ ಅನುಪಾತವು 1000:1000 ಆಗಿತ್ತು. ಆದಾಗ್ಯೂ, ಇದು 2015-16 ರಲ್ಲಿ ಎನ್ ಎಫ್ ಎಚ್ ಎಸ್ ವರದಿಯಲ್ಲಿ 991:1000ಕ್ಕೆ ಇಳಿದಿತ್ತು.
Advertisement. Scroll to continue reading.
‘ಜನನದ ಸಮಯದಲ್ಲಿ ಸುಧಾರಿತ ಲಿಂಗಾನುಪಾತ ಮತ್ತು ಲಿಂಗಾನುಪಾತವು ಸಹ ಒಂದು ಗಮನಾರ್ಹ ಸಾಧನೆಯಾಗಿದೆ. ಜನಗಣತಿಯಿಂದ ನಿಜವಾದ ಚಿತ್ರಣ ಹೊರಹೊಮ್ಮಿದರೂ, ಮಹಿಳಾ ಸಬಲೀಕರಣಕ್ಕಾಗಿ ನಮ್ಮ ಕ್ರಮಗಳು ನಮ್ಮನ್ನ ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಿದ ಫಲಿತಾಂಶಗಳನ್ನ ಈಗ ನಾವು ಕಾಣಬಹುದಾಗಿದೆ’ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ನ ಮಿಷನ್ ನಿರ್ದೇಶಕ ವಿಕಾಸ್ ಶೀಲ್ ತಿಳಿಸಿದ್ದಾರೆ.
1020:1000 ಲಿಂಗಾನುಪಾತವು ದೇಶವು ಸಾಧಿಸಿದ ಮಹತ್ವದ ಮೈಲಿಗಲ್ಲಾಗಿದೆಯಾದ್ರೂ, ಕಳೆದ ಐದು ವರ್ಷಗಳಲ್ಲಿ ಜನನದ ಲಿಂಗ ಅನುಪಾತವು 929 ಆಗಿದೆ.
Advertisement. Scroll to continue reading.