ಪರ್ಕಳ : ಮಣಿಪಾಲ ಎಂಐಟಿ ಉದ್ಯೋಗಿ ಆರ್ ಮನೋಹರ್ ಆವಿಷ್ಕರಿಸಿದ ಟೆಲಿಸ್ಕೋಪ್ ಮೂಲಕ ಭೂಮಿಗೆ ಹತ್ತಿರವಾಗಿ ಕಾಣಿಸುತ್ತಿರುವ ಗ್ರಹಗಳಾದ ಗುರು ಶುಕ್ರ ಶನಿ ಗ್ರಹಗಳನ್ನು ಖಗೋಳಾಸಕ್ತರಿಗೆ ವೀಕ್ಷಿಸಲು ಅವಕಾಶ ಕೊಡಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಪೋಷಕರು ಹಾಗೂ ಸಾರ್ವಜನಿಕರು ಪಾಲ್ಗೊಂಡರು.
ಈ ಸಂದರ್ಭದಲ್ಲಿ ಜಯ ಶೆಟ್ಟಿ ಬನ್ನಂಜೆ, ಸಿಸ್ಟರ್ ಗೀತಾ, ಗಣೇಶ್ ರಾಜ್ ಸರಳಬೆಟ್ಟು, ಪರ್ಕಳ ಮೋಹನ್ ದಾಸ್ ನಾಯಕ್, ವಾಲ್ಟರ್ ಡಿಸೋಜ, ಕೊಳಲಗಿರಿ ರಾಜೇಶ್ ಪ್ರಭು ಪರ್ಕಳ, ಪ್ರಕಾಶ್ ನಾಯ್ಕ್, ರಾಮಣ್ಣ ನಾಯ್ಕ್ ಹಿರಿಯಡಕ, ಸುಧೀರ್ ಶೆಟ್ಟಿ ಹಿರಿಯಡ್ಕ ಮೊದಲಾದವರು ಉಪಸ್ಥಿತರಿದ್ದರು. ಗಣೇಶ ರಾಜ್ ಸರಳೇಬೆಟ್ಟು ಸ್ವಾಗತಿಸಿ, ರಾಜೇಶ್ ಪ್ರಭು ವಂದಿಸಿದರು.
Advertisement. Scroll to continue reading.