ದಿಕ್ಸೂಚಿ ನ್ಯೂಸ್ ಇಂಪ್ಯಾಕ್ಟ್; ಬೊಮ್ಮಾರಬೆಟ್ಟು ಗ್ರಾಮದ ಹದಗೆಟ್ಟಿದ್ದ ರಸ್ತೆ, ಸೇತುವೆ ಕಾಮಗಾರಿ ಆರಂಭ
Published
0
ಹಿರಿಯಡಕ : ಉಡುಪಿ ಜಿಲ್ಲೆಯ ಬೊಮ್ಮಾರಬೆಟ್ಟು ಗ್ರಾಮದ ಗುಡ್ಡೆಂಗಡಿ ಮಾರ್ಗವಾಗಿ ಹಿರಿಯಡ್ಕವನ್ನು ಸಂಪರ್ಕಿಸುವ ಒಳದಾರಿ ಪಾಲೆಮಾರು ರಸ್ತೆಯು ಸಂಪೂರ್ಣ ಹದಗೆಟ್ಟಿತ್ತು. ಇಲ್ಲಿನ ಕಿರುಸೇತುವೆಯೊಂದು ಆಗಲೋ ಈಗಲೋ ಕುಸಿದು ಬೀಳುವ ಹಂತದಲ್ಲಿದ್ದು ಜನರು ತಮ್ಮ ಪ್ರಾಣವನ್ನು ಅಂಗೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಎದುರಾಗಿತ್ತು. ಈ ಬಗ್ಗೆ ದಿಕ್ಸೂಚಿ ನ್ಯೂಸ್ ವಿಸ್ತ್ರತ ವರದಿ ಮಾಡಿತ್ತು. ಇದೀಗ ದುರಸ್ಥಿ ಕಾರ್ಯ ಆರಂಭವಾಗಿದೆ. ಸಾರ್ವಜನಿಕರು ಸುಸಜ್ಜಿತ ಸೇತುವೆ, ರಸ್ತೆಯ ನಿರೀಕ್ಷೆಯಲ್ಲಿದ್ದಾರೆ.