ಉಡುಪಿ : ಗ್ರಂಥ ಸಂಪಾದನೆ ಮತ್ತು ಅನುವಾದ ಸಾಹಿತ್ಯಕ್ಕೆ ಬನ್ನಂಜೆ ಅವರ ಕೊಡುಗೆ ಅಮೂಲ್ಯ : ಸಗ್ರಿ ರಾಘವೇಂದ್ರ ಉಪಾಧ್ಯಾಯ
Published
1
ಉಡುಪಿ : ಏಳುನೂರು ವರ್ಷ ಕಾಲ ಉಡುಪಿಯ ಪಲಿಮಾರು ಮಠದಲ್ಲಿ ಸುರಕ್ಷಿತವಾಗಿ ಇದ್ದ ಮಧ್ವಾಚಾರ್ಯರ, ತುಳು ಲಿಪಿಯ ಸರ್ವಮೂಲ ಗ್ರಂಥಗಳ ಸಂಪಾದನೆ, ಮಹಾಭಾರತ ತಾತ್ಪರ್ಯ ನಿರ್ಣಯ ವಿಮರ್ಶೆಯ ಸಂಸ್ಕೃತ ಗ್ರಂಥ, ಕಾಳಿದಾಸ, ಭಾಸ, ಬಾಣ ಭಟ್ಟ, ಶೂದ್ರಕ ರ ಸಂಸ್ಕೃತ ನಾಟಕಗಳ ಅನುವಾದ ಬನ್ನಂಜೆ ಗೋವಿಂದಾಚಾರ್ಯರ ಮಹತ್ವದ ಕೊಡುಗೆಗಳು. ಅವರ ಕೊಡುಗೆಯ ಮಹತ್ವ ಗುರುತಿಸುವ ವಿಮರ್ಶಿಸುವ ಗೋಷ್ಠಿಗಳು ಇನ್ನಷ್ಟು ನಡೆಯಬೇಕು ಎಂದು ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಸಗ್ರಿ ರಾಘವೇಂದ್ರ ಉಪಾಧ್ಯಾಯರ ತಿಳಿಸಿದರು.
ಅವರು ಉಡುಪಿ ಯ ರಥ ಬೀದಿ ಗೆಳೆಯರು, ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಮತ್ತು ಸಂಸ್ಕೃತ ಭಾರತಿ ಏರ್ಪಡಿಸಿದ್ದ ಬನ್ನಂಜೆ ಕೃತಿ ಸ್ಮೃತಿ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ. ರಾಘವೇಂದ್ರ ರಾವ್ ಕನ್ನಡ ಅನುವಾದ ಸಾಹಿತ್ಯಕ್ಕೆ ಬನ್ನಂಜೆ ಅವರು ನೀಡಿದ ಕೊಡುಗೆಯ ಸೊಗಸನ್ನು ವಿವರಿಸಿದರು.
Advertisement. Scroll to continue reading.
ಎಚ್ ಎನ್ ನಟರಾಜ್, ಶಂಭು ಭಟ್, ಪ್ರಣಾದ ರಾವ್, ಸುರಭಿ ಕೊಡವೂರು ಬನ್ನಂಜೆ ಅವರ ಗೀತೆಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಕೃತ ಭಾರತಿಯ ಶ್ರೀಮತಿ ಸುಧಾ ಶೆಣೈ, ರಥ ಬೀದಿ ಗೆಳೆಯರ ಅಧ್ಯಕ್ಷ ಪ್ರೊ ಮುರಳೀಧರ ಉಪಾಧ್ಯ, ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ಉಪಸ್ಥಿತ ರಿದ್ದರು. ಶ್ರೀಮತಿ ಶಕುಂತಲಾ ಶೆಣೈ ಸ್ವಾಗತಿಸಿದರು. ಜಿ.ಪಿ.ಪ್ರಭಾಕರ ವಂದಿಸಿದರು.