ಅಂತಾರಾಷ್ಟ್ರೀಯ

ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ಕುರಿತು ಹೋರಾಡಿದ್ದ ನೊಬೆಲ್ ಪುರಸ್ಕೃತ ಡೆಸ್ಮಂಡ್ ಟುಟು ನಿಧನ

1

ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರುದ್ದ ಹೋರಾಡಿದ್ದ ಡೆಸ್ಮಂಡ್ ಟುಟು ಇಂದು ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಈ ಬಗ್ಗೆ ಅಧ್ಯಕ್ಷ ಸಿರಿಲ್ ರಾಮಫೋಸಾ ಮಾಹಿತಿ ನೀಡಿದ್ದಾರೆ.

ವರ್ಣಭೇದ ನೀತಿಯ ಅಹಿಂಸಾತ್ಮಕ ಹೋರಾಟಕ್ಕಾಗಿ 1984 ರಲ್ಲಿ ಟುಟು ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ವರ್ಣಭೇದ ನೀತಿಯ ವಿರುದ್ಧ ಹೋರಾಡಿದ್ದ ನೆಲ್ಸನ್ ಮಂಡೇಲಾ ಅವರ ಸಮಕಾಲೀನರು ಟುಟು. 1948ರಿಂದ 1991 ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ಕಪ್ಪು ಬಹುಸಂಖ್ಯಾತರ ವಿರುದ್ಧ ಬಿಳಿ ಅಲ್ಪಸಂಖ್ಯಾತ ಸರ್ಕಾರವು ಜಾರಿಗೊಳಿಸಿದ ಜನಾಂಗೀಯ ಪ್ರತ್ಯೇಕತೆ ಮತ್ತು ತಾರತಮ್ಯದ ನೀತಿಯನ್ನು ಕೊನೆಗೊಳಿಸುವ ಚಳುವಳಿಯ ಹಿಂದಿನ ಪ್ರೇರಕ ಶಕ್ತಿಗಳಲ್ಲಿ ಒಬ್ಬರಾಗಿದ್ದರು.

Advertisement. Scroll to continue reading.

ವರ್ಣಭೇದ ನೀತಿಯನ್ನು ನಿರ್ಮೂಲನೆ ಮಾಡುವ ಹೋರಾಟದಲ್ಲಿ ಅವರ ಪಾತ್ರಕ್ಕಾಗಿ ಅವರಿಗೆ 1984 ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. . 

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com