ಬಡತನದಿಂದ ಕಂಗೆಟ್ಟಿದ್ದ ಪೆರ್ಡೂರಿನ ಎರಡು ಕುಟುಂಬಗಳಿಗೆ ಸಹಾಯಹಸ್ತ ಚಾಚಿದ ಸಮಾಜ ಸೇವಕರು
Published
0
ಉಡುಪಿ : ಪೆರ್ಡೂರಿನ ಬೈರಂಪಳ್ಳಿ ಎಂಬಲ್ಲಿ ಹತ್ತು ಹಲವಾರು ಸಮಸ್ಯೆಗಳನ್ನು ಹೊಂದಿದ್ದ ಎರಡು ಅತ್ಯಂತ ಬಡ ಕುಟುಂಬಗಳಿಗೆ ಒಂದು ತಿಂಗಳಿಗಾಗುವಷ್ಟು ರೇಷನ್ ಸಾಮಾನನ್ನು ಸಮಾಜ ಸೇವಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ಅನ್ಸಾರ್ ಅಹಮದ್ ರವರ ವತಿಯಿಂದ ನೀಡಲಾಯಿತು.
ಅವರ ಪರಿಸ್ಥಿತಿ ಸುಧಾರಿಸುವ ತನಕ ಇದೇ ರೀತಿ ಪ್ರತೀ ತಿಂಗಳು ಅವರಿಗೆ ಬೇಕಾಗುವ ರೇಷನ್ ಸಾಮಾನನ್ನು ಅವರ ಮನೆ ತನಕ ಮುಟ್ಟಿಸುವ ಸಂಕಲ್ಪವನ್ನು ಮಾಡಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಪತ್ರಕರ್ತ ಕಾರ್ತಿಕ್ ಕುಂದರ್, ಹಿಂದೂ ಪರ ಸಂಘಟನೆಯ ಮುಖಂಡರಾದ ಸಂತೋಷ್ ಕುಮಾರ್ ಬೈರಂಪಳ್ಳಿ, ನಾಸಿರ್ ಯಾಕೂಬ್ ಹಾಗೂ ಝಾಕಿರ್ ರವರು ಉಪಸ್ಥಿತರಿದ್ದರು.