ಮನ್ ಕೀ ಬಾತ್ ನಲ್ಲಿ ಉಡುಪಿ ಮೂಲದ ದಂಪತಿಯ ಕಾರ್ಯವನ್ನು ಹೊಗಳಿದ ಪ್ರಧಾನಿ ಮೋದಿ!
Published
0
ಉಡುಪಿ : ಕುಂದಾಪುರದ ನವ ವಿವಾಹಿತ ಜೋಡಿಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುವುದರೊಂದಿಗೆ ಇದೀಗ ಪ್ರಧಾನಿ ನರೇಂದ್ರ ಮೋದಿಯವರೂ ಶ್ಲಾಘಿದ್ದಾರೆ. ಸೋಮೇಶ್ವರ ಬೀಚ್ ನಲ್ಲಿದ್ದ 800 ಕೆ.ಜಿ.ಗೂ ಅಧಿಕ ಕಸವನ್ನು ತೆಗೆದು ಸ್ವಚ್ಛಗೊಳಿಸಿದ ಅನುದೀಪ್ ಹಾಗೂ ಮಿನುಶಾ ಜೋಡಿಯ ಕಾರ್ಯಕ್ಕೆ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವಚ್ಛ ಭಾರತ ಅಭಿಯಾನದಲ್ಲಿ ದೇಶದ ಜನರು ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದ್ದಾರೆ.
ಬೈಂದೂರು ಮೂಲದ ಕಳವಾಡಿಯ ಅನುದೀಪ್ ಮತ್ತು ಮಿನುಷಾ ಕಾಂಚನ್ ನವ ಜೋಡಿ ಹಸೆಮಣೆ ಏರಿದ ತಕ್ಷಣ ಹನಿಮೂನ್ ಗೆ ಏರದೆ ಸಮುದ್ರ ತೀರದ ಸ್ವಚ್ಛತಾ ಕಾರ್ಯ ಮಾಡಿದ್ದರು. ನವೆಂಬರ್ 27 ರಿಂದ ಡಿಸೆಂಬರ್ 7 ರ ವರೆಗೆ ಈ ಜೋಡಿ ಕಡಲ ತೀರವನ್ನು ಸ್ವಚ್ಛಗೊಳಿಸಿತ್ತು. ಸೋಶಿಯಲ್ ಮೀಡಿಯಾದಲ್ಲೂ ಈ ಜೋಡಿಯ ಕಾರ್ಯಕ್ಕೆ ಮೆಚ್ಚುಗೆ ಮಹಾಪೂರವೇ ಹರಿದು ಬಂದಿತ್ತು.