ಮಂಗಳೂರು: ಬದುಕಿನ ಮತ್ತು ಜೀವನದ ಬದಲಾವಣೆಗೆ ಜನಪದ ಕಲೆಗಳು ನಾಟಕಗಳ ಅನೇಕ ಕಥೆಗಳು ಜೀವನ ಸಂದೇಶವನ್ನು ನೀಡುತ್ತದೆ ಎಂದು ಧಾರ್ಮಿಕ ಮಾರ್ಗದರ್ಶಕ ಉಡುಪಿಯ ಸಂತೋಷ ಆಚಾರ್ಯ ಹೇಳಿದರು.
ಭಾನುವಾರ ಮಂಗಳೂರು ಪುರಭವನದಲ್ಲಿ ಜರುಗಿದ ಜೈ ಮಾತಾ ಕಲಾ ತಂಡ ಮಂಗಳೂರು ಇದರ 8 ನೇವರ್ಷದ ಸಂಭ್ರಮ ಮತ್ತು ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ತುಳು ರಂಗಭೂಮಿ ಅನೇಕ ಜನರ ಬದುಕನ್ನು ಬದಲಾವಣೆ ಮಾಡಿದ ಉದಾಹರಣೆ ಇದೆ ಎಂದರು.
Advertisement. Scroll to continue reading.
ಹಿರಿಯ ರಂಗಭೂಮಿ ಕಲಾವಿದೆ ಜಯಶೀಲ ಮರೋಳಿ ಹಾಗೂ ತಂಡದ ಪ್ರೋತ್ಸಾಹಕ ಯಶವಂತ ಪಾಂಗಾಳ ಇವರನ್ನು ಮಂಗಳೂರು ಲಕುಮಿ ತಂಡದ ಕಿಶೋರ್ ಡಿ ಶೆಟ್ಟಿ ಸನ್ಮಾನಿಸಿದರು.
ಶಶಿರಾಜ್ ಶೆಟ್ಟಿ ಕೊಳಂಬೆ , ಪ್ರವೀಣ್ ಕುಮಾರ್ ಕೊಡಿಯಾಲ ಬೈಲ್ , ದೀನನಾಥ್ ಶೆಟ್ಟಿ , ಮನೋಹರ ನಾಯ್ಕ್ , ಮೋಹನ್ ದಾಸ್ ಕೊಟ್ಟಾರಿ , ಲೋಕೇಶ್ ಪೂಜಾರಿ , ಹಾಜಿ ಮಹ್ಮದ್ ಕುಕ್ಕುವಳ್ಳಿ ಜ್ಞಾನೇಶ್ ಆಚಾರ್ಯ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಒಂತೆ ಕಾಪುಲೆ ತುಳು ನಾಟಕ ಜರುಗಿತು.