ರಾಮಾನುಜಾಚಾರ್ಯರ ಸಮತಾಮೂರ್ತಿ ಸ್ವರ್ಣ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್
Published
2
ಹೈದರಾಬಾದ್ : ಶ್ರೀರಾಮಾನುಜಾಚಾರ್ಯರ 1003ನೇ ಜಯಂತಿ ನಿಮಿತ್ತ ಹೈದರಾಬಾದ್ ನ ಹೊರವಲಯದಲ್ಲಿ ನಿರ್ಮಾಣಗೊಂಡಿರುವ ರಾಮಾನುಜಾಚಾರ್ಯರ ಸಮತಾಮೂರ್ತಿ ಸ್ವರ್ಣ ಪ್ರತಿಮೆಯನ್ನು ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಲೋಕಾರ್ಪಣೆ ಮಾಡಿದರು.
ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿನ ಮುಚ್ಚಿಂತಲ್ ಪ್ರದೇಶದಲ್ಲಿ ನೂತನವಾಗಿ 216 ಅಡಿ ಎತ್ತರದ ರಾಮಾನುಜಾಚಾರ್ಯರ ಸಮತಾಮೂರ್ತಿ ಸ್ವರ್ಣ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದರು.
ಮುಚ್ಚಿಂತಲ್‌ನಲ್ಲಿ ಫೆ.2ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಫೆ.14ರಂದು ಮುಕ್ತಾಯಗೊಳ್ಳಲಿದೆ. ಫೆ.5 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲೂ ಭಾಗಿಯಾಗಿ ಶ್ರೀರಾಮಾನುಜಾಚಾರ್ಯರ 216 ಅಡಿ ಎತ್ತರದ ಪಂಚಲೋಹದ ಮೂರ್ತಿಯನ್ನು ಅನಾವರಣಗೊಳಿಸಿದ್ದರು. ಇಂದು ರಾಮ್‌ನಾಥ್ ಕೋವಿಂದ್ ಅವರು 120 ಕೆಜಿ ಚಿನ್ನದಿಂದ ಕೂಡಿದ ರಾಮಾನುಜಾಚಾರ್ಯರ ಸ್ವರ್ಣ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದಾರೆ.