ಹೆಬ್ರಿ : ಜ್ಞಾನ ವಿಜ್ಞಾನವಿಲ್ಲದೆ ಸುಜ್ಞಾನ ಇಲ್ಲ : ಸಾಹಿತಿ ಅಂಬಾತನಯ ಮುದ್ರಾಡಿ
Published
0
ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ನಮ್ಮಲ್ಲಿ ಜ್ಞಾನ ವಿಜ್ಞಾನ ಇಲ್ಲದೆ ಸುಜ್ಞಾನ ಇಲ್ಲ, ವೈಜ್ಞಾನಿಕ ಸಂಶೋಧನೆಯ ಕೆಲಸಗಳು ನಿರಂತರವಾಗಿ ನಡೆಯಬೇಕಿದೆ, ಮೂಡನಂಬಿಕೆಗಳಿಗೆ ಶರಣಾಗಬಾರದು, ಪವಾಡಗಳಿಗೆ ಮಾರು ಹೋಗಬಾರದು ಯಥಾರ್ಥಕ್ಕೆ ಮಾರು ಹೋಗಿ, ವೈಜ್ಞಾನಿಕ ಸಂಶೋಧನಾ ಪರಿಷತ್ತು ನಮ್ಮ ಪ್ರೀತಿಯ ಸಂಸ್ಥೆ, ನಿಮ್ಮೆಲ್ಲರ ಪ್ರೀತಿ ಮತ್ತು ಪರಿಷತ್ತಿನ ಜೊತೆಗೆ ನಾವು ಸದಾ ಇರುತ್ತೇನೆ, ವೈಜ್ಞಾನಿಕ ಯುಗವೇ ಉತ್ತುಂಗಕ್ಕೆ ಹೋಗುವ ಈ ಕಾಲಘಟ್ಟದಲ್ಲಿ ಹಳ್ಳಿಯ ಮಂದಿಯಲ್ಲೂ ವೈಜ್ಞಾನಿಕ ಮನೋಭಾವ ಬೆಳೆಸಿ ಮೌಢ್ಯವನ್ನು ದೂರ ಮಾಡುವ ಕೆಲಸಗಳು ನಿರಂತರವಾಗಿ ನಡೆಯಬೇಕಿದೆ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಮೂಲಕ ಈ ಮಹತ್ವದ ಕೆಲಸಗಳು ನಡೆಯಲಿ ಎಂದು ಹಿರಿಯ ಸಾಹಿತಿ ವಿಮರ್ಶಕರಾದ ಅಂಬಾತನಯ ಮುದ್ರಾಡಿ ಹೇಳಿದರು.
ಅವರು ಶನಿವಾರ ಹೆಬ್ರಿ ಅನಂತಪದ್ಮನಾಭ ಸನ್ನಿಧಿಯಲ್ಲಿ ಪಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಉಡುಪಿ ಜಿಲ್ಲೆಯ ನೂತನ ಹೆಬ್ರಿ ತಾಲ್ಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
Advertisement. Scroll to continue reading.
ಆಶಯ ಭಾಷಣ ಮಾಡಿದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಬೈಂದೂರು ಆರೋಗ್ಯಕರ ಸಮಾಜ ಕಟ್ಟುವುದೇ ನಮ್ಮ ಉದ್ದೇಶ, ನಂಬಿಕೆಯಿಂದ ಜೀವನ ಮಾಡಿ ಮೌಢ್ಯದಿಂದ ದೂರವಿರಬೇಕು, ಸತ್ಯದ ಅರಿವು ನಮಗೆ ಇರಬೇಕು, ಓದನ್ನು ವೃತ್ತಿಗಾಗಿ ಮಾತ್ರ ಸೀಮಿತಗೊಳಿಸಬೇಡಿ, ಶಿಕ್ಷಣವನ್ನು ಬದುಕಿನಲ್ಲಿ ಅಳವಡಿಸಿ ವಿವೇಚನೆ ಮಾಡುವಷ್ಟು ನಾವು ಪ್ರಬುದ್ಧರಾದಾಗ ಮಾತ್ರ ನಮ್ಮ ಬದುಕು ನಾವು ಕಟ್ಟಬಹುದು, ಉಡುಪಿ ಜಿಲ್ಲೆಯಾದ್ಯಂತ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತನ್ನು ಕಟ್ಟಿ ಬೆಳೆಸಲು ಸಮಾನ ಮನಸ್ಕರು ಕೈಜೋಡಿಸಿ ಎಂದು ಶುಭಹಾರೈಸಿದರು.
ಸಾಹಿತಿ ಅಂಬಾತನಯ ಮುದ್ರಾಡಿ, ವಿಜ್ಞಾನಿ ಭೋಜ ಶೆಟ್ಟಿ ಹೆಬ್ರಿ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಜಗನ್ನಾಥ ಪನ್ಸಾಲೆ ಜನವಾಡ, ಜಿಲ್ಲಾಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್,ಹೆಬ್ರಿ ತಾಲ್ಲೂಕು ಘಟಕದ ಅದ್ಯಕ್ಷ ನವೀನ್ ಕೆ ಅಡ್ಯಂತಾಯ ಅವರನ್ನು ಸನ್ಮಾನಿಸಲಾಯಿತು. ಸಮಾಜ ಸೇವಕರಾದ ಹೆಬ್ರಿ ಭಾಸ್ಕರ ಜೋಯಿಸ್, ಉದ್ಯಮಿ ಎಚ್.ಪ್ರವೀಣ್ ಬಲ್ಲಾಳ್, ಹೆಬ್ರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಣೇಶ್ ಕುಮಾರ್ ಜರ್ವತ್ತು, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಪ್ರದಾನ ಕಾರ್ಯದರ್ಶಿ ಡಾ.ಕಿಶೋರ್ ಕುಮಾರ್ ಶೆಟ್ಟಿ, ಹೆಬ್ರಿ ತಾಲ್ಲೂಕು ಘಟಕದ ಉಪಾಧ್ಯಕ್ಷ ಎಚ್.ಚಂದ್ರ ನಾಯ್ಕ್, ಸಂಘಟನಾ ಕಾರ್ಯದರ್ಶಿ ರವೀಂದ್ರ ಎಚ್, ಮಹಿಳಾ ಸಂಚಾಲಕಿ ಇಂದಿರಾ ಉಡುಪಿ, ಸಂಚಾಲಕ ಸುಕುಮಾರ್ ಮುನಿಯಾಲ್, ನಿರ್ದೇಶಕರಾದ ಬೈಕಾಡಿ ಮಂಜುನಾಥ ರಾವ್‌ಶಿವಪುರ, ಸೀತಾನದಿ ವಿಜೇಂದ್ರ ಶೆಟ್ಟಿ, ಮುರಳೀಧರ ಭಟ್, ಉಪಾಧ್ಯಕ್ಷ ಟಿ.ಜಿ.ಆಚಾರ್ಯ, ಮಹಿಳಾ ಉಪಾಧ್ಯಕ್ಷೆ ಸುನೀತಾ ಅರುಣ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಶ್ರೀಧರ ಹೆಬ್ಬಾರ್ ಕಾಪೋಳಿ ಕಬ್ಬಿನಾಲೆ, ಕೋಶಾಧ್ಯಕ್ಷ ಎಚ್.ಜನಾರ್ಧನ್ ಹೆಬ್ರಿ, ಸಹ ಕಾರ್ಯದರ್ಶಿ ನಿತೀಶ್‌ಎಸ್‌ಪಿ, ಸಂಘಟನಾ ಕಾರ್ಯದರ್ಶಿ ಬೇಳಂಜೆ ಹರೀಶ ಪೂಜಾರಿ, ಸಂಚಾಲಕ ಪ್ರವೀಣ್ ಸೂಡ, ಮಹಿಳಾ ಸಂಚಾಲಕಿ ಸುನಂದ ಕುಲಾಲ್ ಶಿವಪುರ, ನಿರ್ದೇಶಕರಾದ ನಿತ್ಯಾನಂದ ಶೆಟ್ಟಿ, ಬಲ್ಲಾಡಿ ಚಂದ್ರಶೇಖರ ಭಟ್, ಶಶಿಕಲಾ ಪೂಜಾರಿ ಚಾರ, ಸುಜಾತ ಶೆಟ್ಟಿ ಕುಚ್ಚೂರು, ಸುಧಾ ಜಿ. ನಾಯಕ್ ಚಾರ ಮತ್ತು ಅಕ್ಷಿತಾ ಕೆ. ಶೆಟ್ಟಿ ಸೋಮೇಶ್ವರ, ಹೆಬ್ರಿ ಘಟಕದ ಮಾರ್ಗದರ್ಶಕರು, ಗೌರವ ಸಲಹೆಗಾರರು ಮತ್ತು ಗೌರವ ಸದಸ್ಯರು ಉಪಸ್ಥಿತರಿದ್ದರು. ಗೌರವ ಸಲಹೆಗಾರ ಪ್ರಕಾಶ ಪೂಜಾರಿ ಮಾತಿಬೆಟ್ಟು ನಿರೂಪಿಸಿ ಶ್ರೀಧರ ಹೆಬ್ಬಾರ್ ಸ್ವಾಗತಿಸಿ ಟಿ.ಜಿ.ಆಚಾರ್ಯ ವಂದಿಸಿದರು.