ನವದೆಹಲಿ : ಯುದ್ಧಪೀಡಿತ ಉಕ್ರೇನ್ ನಿಂದ ಸ್ಥಳಾಂತರಗೊಳ್ಳುವ ಭಾರತೀಯರಿಗೆ ಆರೋಗ್ಯ ಸಚಿವಾಲಯವು ಅಂತಾರಾಷ್ಟ್ರೀಯ ಪ್ರಯಾಣ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ. ಕೋವಿಡ್-19 ಸಂಬಂಧಿತ ಹಲವಾರು ವಿನಾಯಿತಿಗಳನ್ನು ನೀಡಲಾಗಿದೆ.
ಕಡ್ಡಾಯ ಪ್ರಿ-ಬೋರ್ಡಿಂಗ್ ನೆಗೆಟಿವ್ ಆರ್ ಟಿ-ಪಿಸಿಆರ್ ಪರೀಕ್ಷೆ ಮತ್ತು ಲಸಿಕೆ ಪ್ರಮಾಣಪತ್ರದ ವಿಚಾರದಲ್ಲಿ ಭಾರತೀಯರಿಗೆ ವಿನಾಯಿತಿ ನೀಡಲಾಗಿದೆ. ಏರ್-ಸುವಿಧಾ ಪೋರ್ಟಲ್ ನಲ್ಲಿ ಹೊರಡುವ ಮೊದಲು ಅವರು ದಾಖಲೆಗಳನ್ನು ಅಪ್ ಲೋಡ್ ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಉಕ್ರೇನ್ ನಿಂದ ಈವರೆಗೆ ಐದು ವಿಮಾನಗಳು (ಮುಂಬೈನಲ್ಲಿ ಒಂದು ಮತ್ತು ದೆಹಲಿಯಲ್ಲಿ ನಾಲ್ಕು) ಭಾರತಕ್ಕೆ ಬಂದಿದ್ದು, ಇದುವರೆ್ಎ 1,156 ಭಾರತೀಯರನ್ನು ಸ್ಥಳಾಂತರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇಲ್ಲಿಯವರೆಗೆ ಯಾವುದೇ ಪ್ರಯಾಣಿಕರನ್ನು ಪ್ರತ್ಯೇಕವಾಗಿ ಇರಿಸಿಲಾಗಿಲ್ಲ ಎಂದು ಸಚಿವಾಲಯ ತಿಳಿಸಿದೆ.
Advertisement. Scroll to continue reading.